ಪ್ರೀತಿಸುವಂತೆ ಹಿಂದೆ‌ ಬಿದ್ದ ಯುವಕ:ನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಮೈಸೂರು: ಯುವಕನೊಬ್ಬ ಪ್ರೀತಿಸುವಂತೆ ಹಾಗೂ ಮದುವೆ ಆಗುವಂತೆ ಒತ್ತಾಯಿಸಿ ಮಾನಸಿಕ ಹಿಂಸೆ ನೀಡಿದ್ದರಿಂದ ಬೇಸತ್ತು ವಿಧ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಈ ಘಟನೆ ನಂಜನಗೂಡಿನ ನೀಲಕಂಠನಗರದಲ್ಲಿ ನಡೆದಿದ್ದು, ದಿವ್ಯ(17)
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಈ ಸಂಬಂಧ ದೇಬೂರು ಗ್ರಾಮದ ಆದಿತ್ಯ ಎಂಬ ಯುವಕನ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜನಗೂಡಿನ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿವ್ಯಳನ್ನು ಆದಿತ್ಯ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಾನೆ,ಆದರೆ ಇದನ್ನು ದಿವ್ಯಾ ತಿರಸ್ಕರಿಸಿದ್ದಾಳೆ.

ಆದಿತ್ಯಾ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೋಷಕರ ಗಮನಕ್ಕೂ ತಂದಿದ್ದಾಳೆ.ಹುಡುಗನಿಗೆ ಬುದ್ದಿ ಹೇಳುವಂತೆ ತಂದೆ ಗುರುಮೂರ್ತಿ ಕೆಲವು ಹಿರಿಯರಿಗೆ ಹೇಳಿದ್ದಾರೆ.ಆದರೂ ಆದಿತ್ಯ ತನ್ನ‌ಚಾಳಿ ಮುಂದುವರಿಸಿದ್ದ.

ಇದರಿಂದ ಮನ ನೊಂದ ದಿವ್ಯಾ ತಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಂಜನಗೂಡು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.