ಅಕ್ಕಿ ತುಂಬಿದ ಲಾರಿ ಉರುಳಿ ಬಿದ್ದು ಇಬ್ಬರು ಕೂಲಿಕಾರ್ಮಿಕರ ದು*ರ್ಮರಣ

ಮಳವಳ್ಳಿ: ಅಕ್ಕಿ ತುಂಬಿದ ಲಾರಿ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ
ತಾಲೂಕಿನ ಕಿರುಗಾವಲು ಸಮೀಪ ನಡೆದಿದೆ.

ಕಿರುಗಾವಲಿನ ರೈಸ್ ಮಿಲ್ ನಿಂದ ಅಕ್ಕಿ ತುಂಬಿಕೊಂಡು ಬನ್ನೂರಿಗೆ ತೆರಳುತ್ತಿದ್ದ ಮಿನಿ ಲಾರಿ ಕೊದೆನು ಕೊಪ್ಪಲು ಮಾರ್ಗದಲ್ಲಿ ಬರುತ್ತಿದ್ದಾಗ ಉರುಳಿದ್ದರಿಂದ ಇಬ್ಬರು ಕೂಲಿಕಾರ್ಮಿಕರು ಮೃತಪಟ್ಟಿದ್ದಾರೆ.

ಬನ್ನೂರಿನ ವಾಸಿಂ (25) ಸನಿಯಾ (24) ಮೃತಪಟ್ಟ ಕೂಲಿಕಾರ್ಮಿಕರು. ಕಿರುಗಾವಲು ಬಾಸ್ ರೈಸ್ ಮಿಲ್ ನಿಂದ ಅಕ್ಕಿ ತುಂಬಿಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ.

ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದುದು ಪಡಿತರ ಚೀಟಿಯ ಅಕ್ಕಿಯೋ ಅಥವಾ ರೈತರಿಂದ ಖರೀದಿಸಿದ ಭತ್ತದ ಅಕ್ಕಿಯೋ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗ ಬೇಕಿದೆ.

ಈ ಸಂಬಂಧ ಕಿರುಗಾವಲು ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.