ಮಂಡ್ಯ: ಆಸ್ತಿ ವಿಷಯದಲ್ಲಿ ಅಣ್ಣ, ಅಣ್ಣನ ಮಕ್ಕಳು ಸೇರಿ ತಮ್ಮನನ್ನು ಬೆಳ್ಳಂಬೆಳಿಗ್ಗೇನೆ ಕೊಲೆ ಮಾಡಿರುವ ಹೇಯ ಘಟನೆ
ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ.
ಯೋಗೇಶ್(35) ಕೊಲೆಯಾದ ವ್ಯಕ್ತಿ.
ಕೊಲೆಯಾದ ಯೋಗೇಶನ ಅಣ್ಣ ಲಿಂಗರಾಜ, ಅಣ್ಣನ ಮಕ್ಕಳಾದ ಭರತ್, ದರ್ಶನ್ ಅವರುಗಳು ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಬುಧವಾರ ಮೃತ ಯೋಗೇಶ್ ಮದುವೆ ಕೂಡಾ ನಿಶ್ಚಯ ಆಗಿತ್ತು,ಆದರೆ ಬೆಳಿಗ್ಗೆ ಅವರ ಮನೆಯ ಕೊಟ್ಟಿಗೆಯಲ್ಲೇ ಹರಿತವಾದ ಆಯುಧಗಳಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಲಾಗಿದೆ.
ಕೊಲೆ ಬಳಿಕ ಮೂವರು ಆರೋಪಿಗಳು ಪರಾರಿಯಾಗಿದ್ದು,
ಆಸ್ತಿಗಾಗಿ ಸಹೋದರರ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ಯೋಗೇಶ್ ನನ್ನು ಹತ್ಯೆ ಮಾಡಲಾಗಿದೆ.
ಸ್ಥಳಕ್ಕೆ ಕೆರಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

