ದ್ವಾದಶ ಗರುಡೋತ್ಸವ- ಗರುಡ ಜ್ಯೋತಿ ಉದ್ಘಾಟಿಸಿದ ಯದುವೀರ್

ಮೈಸೂರು: ಪಂಚ ಗರುಡೋತ್ಸವ ಸೇವಾ ಸಮಿತಿ ವತಿಯಿಂದ ನಾಳೆ ಭಾನುವಾರ ಜಯ ಲಕ್ಷ್ಮಿಪುರಂನಲ್ಲಿರುವ ಮಹಾಜನ ವಿದ್ಯಾ ಸಂಸ್ಥೆ ಕ್ರೀಡಾಂಗಣದಲ್ಲಿ ತೃತಿಯ ಬಾರಿಗೆ ದ್ವಾದಶ (12) ಗರುಡೋತ್ಸವ ಕಾರ್ಯಕ್ರಮ ನಡೆಯಲಿದೆ.

ಈ ಪ್ರಯುಕ್ತ‌ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಗರುಡ ಜ್ಯೋತಿಯನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.

ಈ‌ ವೇಳೆ ಯದುವೀರ್ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾ ಧ್ಯಕ್ಷರು ಹಾಗೂ ಶಾಸಕರಾದ ಟಿ ಎಸ್ ಶ್ರೀವತ್ಸ,ಸಮಿತಿಯ ಸದಸ್ಯರಾದ ಕೆ ಆರ್ ಯೋಗನರಸಿಂಹನ್( ಮುರಳಿ), ವೀರರಾಘವನ್, ಎಂ ಕೆ.ಶ್ಯಾಮ ಶ್ರೀನಿವಾಸನ್, ರಾಮಪ್ರಿಯನ್, ವೈಯಕರಣಿ ರಾಮಾನುಜಂ, ಆರ್ ರಾಮಸ್ವಾಮಿ, ರಂಗರಾಜು, ಶ್ರೀನಿಧಿ, ಶಾಂತರಾಮ್, ಆನಂದ್, ಕೃಷ್ಣಮೂರ್ತಿ, ಸುದರ್ಶನ್, ರಾಮಾನುಜಂ, ಮಣಿವಣ್ಣನ್, ಜಯಸಿಂಹ, ರಂಗರಾಜನ್, ಜಾನಕಿ ಶೇಷಾದ್ರಿ, ಪದ್ಮಶ್ರೀ, ಕಮಲ, ನಾಗಮಣಿ, ಜಾನಕಿ ಕೃಷ್ಣಮೂರ್ತಿ, ವಿದ್ವಾನ್ ಕೇಶವ್ ಭಟ್ಟ್ ಮತ್ತಿತರರು ಹಾಜರಿದ್ದರು.