ಇ – ಖಾತಾ ಸಮಸ್ಯೆ ಸರಿಪಡಿಸಲು‌ ಅ ಭಾ ಗ್ರಾಹಕ ಪಂಚಾಯತ್ ಆಗ್ರಹ

ಮೈಸೂರು: ಇ – ಖಾತಾ ಸಮಸ್ಯೆ ಸರಿಪಡಿಸುವಂತೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಆಗ್ರಹಿಸಿದೆ.

ಮೈಸೂರಿನ ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಸದಸ್ಯರು‌ ಭೇಟಿ ನೀಡಿ ಇ – ಖಾತಾ ಸಮಸ್ಯೆ ಸರಿಪಡಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಉಪಾಧ್ಯಕ್ಷ ವಿಕ್ರಮ ಅಯ್ಯಂಗಾರ್,ಮೈಸೂರು ನಗರ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಗ್ರಾಹಕರು ಹರಸಾಹಸ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದ ದಿನದಿಂದ ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂದು ಗಮನ ಸೆಳೆದರು.

ದೂರದ ಊರುಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಖರೀದಿದಾರರು, ಮಾರಾಟಗಾರರು ಇಲ್ಲಿಗೆ ಬಂದು ಹಲವು ದಿನಗಳ ನಂತರವೂ ತಮ್ಮ ಕೆಲಸವಾಗದೆ ಬರಿಗೈಯಲ್ಲಿ ಮರಳುತ್ತಿದ್ದಾರೆ, ಆದುದರಿಂದ
ಇ-ಖಾತಾ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಕಂದಾಯ ಸಚಿವರು ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದರು,ಆದರೆ ಫಲಿತಾಂಶ ಮಾತ್ರ ಶೂನ್ಯ, ಯಾವುದೇ
ತಾಂತ್ರಿಕ ದೋಷಗಳಿದ್ದರೂ ಅದನ್ನು ಬೇಗ ಬಗೆಹರಿಸಲಿ,ಜನಸಾಮಾನ್ಯರನ್ನು ಸರಕಾರಿ ಕಚೇರಿಗಳಿಗೆ ಅಲೆದಾಡಿಸುವುದು ಸರಿಯಲ್ಲ,
ಜನರು ಬೀದಿಗಿಳಿಯುವ ಮುನ್ನ ಇ-ಖಾತಾ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಿಕ್ರಮ್ ಅಯ್ಯಂಗಾರ್ ಆಗ್ರಹಿಸಿದರು.

ಆನಂದ, ಕಡಕೋಳ ಜಗದೀಶ್, ದೂರ ರಾಜಣ್ಣ, ಎಸ್ ಎನ್ ರಾಜೇಶ್,ದುರ್ಗಾ ಪ್ರಸಾದ್,ಗುರುರಾಜ್, ಶ್ರೀಕಾಂತ್ ಕಶ್ಯಪ್ ಮತ್ತಿತರರು ಹಾಜರಿದ್ದರು.