ಮೈಸೂರು: ನಗರದ ಖಾಸಗಿ ಹೋಟೆಲ್ ನಲ್ಲಿ ಮೈಸೂರು ಯುವ ಬಳಗದ ವತಿಯಿಂದ ಮಕರ ಸಂಕ್ರಾಂತಿ ಹಬ್ಬವನ್ನು ಮುಸಲ್ಮಾನ, ಕ್ರೈಸ್ತ, ಜೈನ , ಪೋಲಿಸ್, ಪೌರಕಾರ್ಮಿಕರು, ಆಶಾ ಕಾರ್ಯಕರ್ತರೊಂದಿಗೆ ಆಚರಿಸುವ ಮೂಲಕ ಭಾವೈಕ್ಯತೆ ಸಾರಲಾಯಿತು.
ಶಾಸಕ ಹರೀಶ್ ಗೌಡ ಅವರು ಗೋಪೂಜೆ ನೆರವೇರಿಸಿ ಗೋವಿಗೆ ವಿಶೇಷ ಪೂಜೆ ಸಲ್ಲಿಸಿ ಆನಂತರ ಮುಸಲ್ಮಾನರು ,ಕ್ರೈಸ್ತರು, ಜೈನ , ಪೋಲಿಸರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತರೊಂದಿಗೆ ಹಬ್ಬ ಆಚರಿಸಿ, ಎಳ್ಳು, ಬೆಲ್ಲ , ಕಬ್ಬು,ಸೀರೆ ವಿತರಿಸುವ ಮೂಲಕ ಸೌಹಾರ್ದತೆ ಸಾರಿದರು.
ನಂತರ ಮಾತನಾಡಿದ ಹರೀಶ್ ಗೌಡರು
ಇತಿಹಾಸದಲ್ಲಿ ಎಲ್ಲಾ ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲಾ ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಹಿರಿಯ ಮುಖಂಡರುಗಳಾದ ಕಾಂತಿಲಾಲ್ ಜೈನ್, ಮಹಾದೇವ್, ಕನಕದಾಸ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರವಿಚಂದ್ರ, ನವೀನ್, ಗುರುರಾಜ್, ನಂಜುಂಡಸ್ವಾಮಿ,ಸಂತೋಷ, ಇಮ್ರಾನ್ ಖಾನ, ಫಾತಿಮಾ, ಮುನ್ನಿ, ಇಸ್ರಾಮ, ಮಂಗಳ,ಶ್ರೀನಿವಾಸ,ಶೆಟ್ಟಿ,ಸುಬ್ರಹ್ಮಣ್ಯ, ಲೋಕೇಶ್, ಬೆಳಕು ಮಂಜುನಾಥ, ರಾಣಿ, ಜಗದೀಶ್, ಹೇಮಂತ್, ಚೆಲುವರಾಜು ಮತ್ತಿತರರು ಹಾಜರಿದ್ದರು.

