ಸುತ್ತೂರು ಮಠ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ:ಸಿಎಂ ಬಣ್ಣನೆ

ಮೈಸೂರು: ಸುತ್ತೂರು ಜಾತ್ರೆ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ, ಸುತ್ತೂರು ಮಠ ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಮಠ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಸುತ್ತೂರು ಮಠ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ,ಜ್ಞಾನ ಮತ್ತು ಅನ್ನ ದಾಸೋಹಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದರು.

ಇಂದಿಗೆ ಶಿಕ್ಷಣ ಬಹಳ ಮುಖ್ಯ ಶಿಕ್ಷಣದಿಂದ ಮಾತ್ರ ಜ್ಞಾನ ಬರಲು ಸಾಧ್ಯ, ಹಲವರು ಶಿಕ್ಷಣದಿಂದ ವಂಚಿತರಾಗಿದ್ದರು ಹಾಗಾಗಿ ಗ್ರಾಮೀಣ ಭಾಗದಲ್ಲಿ ಸುತ್ತೂರು ಮಠ ಶಿಕ್ಷಣ ಪ್ರಾರಂಭಿಸಿತು ಎಂದು ಮೆಚ್ಚುಗೆಯಿಂದ ಸಿಎಂ ನುಡಿದರು.

ದಯವೇ ಧರ್ಮದ ಮೂಲವಯ್ಯ ಎಂಬುದಾಗಿ ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರ ವಿಚಾರದಲ್ಲಿ ನಂಬಿಕೆ ಉಳ್ಳವರು ಧರ್ಮದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಧರ್ಮಕ್ಕಿಂತ ಮಾನವ ಧರ್ಮ ಅನ್ನೋದನ್ನ ಅರಿಯಬೇಕು. ಎಲ್ಲಾ ಧರ್ಮವು ಪರಸ್ಪರ ಪ್ರೀತಿ ಮಾಡೋದನ್ನ ಹೇಳುತ್ತದೆ,ಯಾವುದೇ ಧರ್ಮ ದ್ವೇಶವನ್ನ ಮಾಡಿ ಅಂತ ಹೇಳುವುದಿಲ್ಲ ಎಂದು ‌ಸಿದ್ದರಾಮಯ್ಯ ತಿಳಿಸಿದರು.