ಹಿಂದೂ ಸಮಾಜೋತ್ಸವ:ಭಾರತ ಮಾತಾ ಭಾವಚಿತ್ರ ಶೋಭಾಯಾತ್ರೆ

ಮೈಸೂರು: ಮೈಸೂರಿನ‌ ಬೃಂದಾವನ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಹಿಂದೂ ಸಮಾಜೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.

ಮೇಟಗಳ್ಳಿ ಗಣೇಶ ದೇವಸ್ಥಾನದಿಂದ ಭಾರತ ಮಾತಾ ಭಾವಚಿತ್ರವನ್ನು ಎತ್ತಿನಗಾಡಿಯ ಮೇಲೆ ಮಂಗಳವಾದ್ಯ, ಕಳಶ ಹೊತ್ತ ಸುಮಂಗಲಿಯರು, ಚಂಡೆ ವಾದ್ಯದೊಂದಿಗೆ ಶೋಭಾಯಾತ್ರೆ ಮೂಲಕ ಸಮಾರಂಭದ ಜಾಗಕ್ಕೆ ವಿಜೃಂಭಣೆಯಿಂದ ಬರಮಾಡಿಕೊಳ್ಳಲಾಯಿತು.

ಸಾರ್ವಜನಿಕ ಸಭಾ ಕಾರ್ಯಕ್ರಮಕ್ಕೆ ಮುಂಚೆ ಸಾಯಿರಂಗ ದಿವ್ಯಾಂಗ ಶಾಲೆ ಮಕ್ಕಳಿಂದ ನೃತ್ಯ ರೂಪಕ ಪ್ರದರ್ಶನ ಎಲ್ಲರ ಮನಸ್ಸನ್ನು ಸೂರೆಗೊಂಡಿತು.

ಉಪನ್ಯಾಸಕರಾದ ಮಯೂರ ಲಕ್ಷ್ಮೀ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ಆತ್ಮನಿರತಾಮೃತ ಸ್ವಾಮೀಜಿ ಯವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇಂಬರ್ಸ್ ಆಫ್ ಕಾಮರ್ಸ್, ಮೈಸೂರು ಅಧ್ಯಕ್ಷ ಬಿ .ಲಿಂಗರಾಜು ವಹಿಸಿದ್ದರು.
ಜ್ಯೇಷ್ಠ ಪ್ರಚಾರಕರಾದ ಸು. ರಾಮಣ್ಣ ದಿಕ್ಸೂಚಿ ಭಾಷಣ ಮಾಡಿದರು.

ವಿದ್ಯಾ ಗೋಪಾಲ ಕಾರ್ಯಕ್ರಮವನ್ನು ನಿರ್ವಹಿಸಿದರು, ಲಕ್ಷ್ಮೀ ಸುರೇಶ್ ಸ್ವಾಗತಿಸಿದರೆ ಮಂಜುಳ ರಮೇಶ್ ಧನ್ಯವಾದ ಸಮರ್ಪಣೆ ಮಾಡಿದರು.

ಕಾರ್ಯಕ್ರಮದ ನಂತರ ಎಲ್ಲರಿಗೂ ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು.