ಮೈಸೂರಲ್ಲಿ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ 81ನೇ ಜಯಂತೋತ್ಸವ

ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಮೈಸೂರಿನ ಅಗ್ರಹಾರ ವೃತ್ತದಲ್ಲಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಜಗದ್ಗುರು ಭೈರವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ 81 ನೇ ಜಯಂತೋತ್ಸವ ಆಚರಿಸಲಾ ಯಿತು.

ಈ ಸಂದರ್ಭದಲ್ಲಿ ಶ್ರೀಗಳ ಪ್ರತಿಮೆಗೆ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ ಗಂಗಾಧರ್ ಅವರು ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು,
ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಎಲ್ಲಾ ವರ್ಗದ, ಸಮುದಾಯದ, ಬಡ ಜನರ ಸೇವೆ ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದವರು. ಶ್ರೀ ರಾಮ ಜನ್ಮಭೂಮಿಗೆ ಬಹಳ ಹೋರಾಟ ಮಾಡಿದವರು ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಎಂದು ಬಣ್ಣಿಸಿದರು.

ರಾಜ್ಯದಲ್ಲಿ ಸುಮಾರು 554 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ನಡೆಸುವ ಮೂಲಕ ಎಲ್ಲಾ ವರ್ಗದವರಿಗೂ ಶಿಕ್ಷಣ ನೀಡುತ್ತಿದೆ ಅವರೊಬ್ಬ ಮಹಾನ್ ತಪಸ್ವಿ, ಮಹಾನ್ ಸಂತ,ಇವರ ಆದರ್ಶ, ತತ್ವಗಳನ್ನು ಪ್ರತಿಯೊಬ್ಬ ಸ್ವಾಮೀಜಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಾಯಕನಟ ಎಸ್ ಜಯಪ್ರಕಾಶ್ ಮಾತನಾಡಿ, ಶ್ರೀಗಳು ದೇಶ ಕಂಡ ಅಪ್ರತಿಮ ಸಂತ. ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ, ರಾಜ್ಯದಲ್ಲಿ ಹಿಂದುತ್ವದ ಬಗ್ಗೆ ಬಹಳಷ್ಟು ಪ್ರಚಾರ ಮಾಡಿ, ಬೆಂಗಳೂರಿನಲ್ಲಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶ್ರೀಗಳು ಹಾಗೂ ಪೇಜಾವರ ಶ್ರೀಗಳು ದೊಡ್ಡ ಹಿಂದುತ್ವದ ಸಮಾವೇಶ ಮಾಡಿ ದೇಶದ ಗಮನ ಸೆಳೆದರು. ಇವರೆಲ್ಲರ ಹೋರಾಟದ ಫಲದಿಂದ ಇಂದು ಪ್ರಧಾನಿಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ಇಂತಹ ಶ್ರೀಗಳ ಜೀವನ ಚರಿತ್ರೆಯನ್ನು ಪಠ್ಯಗಳಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಹಿರಿಯ ಸಂಸ್ಕೃತಿ ಪೋಷಕರಾದ ಡಾ. ರಘುರಾಂ ಕೆ ವಾಜಪೇಯಿ ರವರು ಸಿಹಿ ವಿತರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ಎಂ ಬಿ ಮಂಜೇಗೌಡ, ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಗೋವಿಂದೇಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಗೋಲ್ಡನ್ ಗಣೇಶ್, ಲಕ್ಷೀದೇವಿ, ಶಿವಲಿಂಗಯ್ಯ, ಚರಣ್ ರಾಜ್, ಯಶ್ವಂತ್ ಕುಮಾರ್, ನೇಹಾ, ಶೋಭಾ ರಾಣಿ ಗೌಡ, ಭಾಗ್ಯಮ್ಮ, ಡಾ . ಮೊಗಣ್ಣಾಚಾರ್, ಹನುಮಂತಯ್ಯ, ಸುಜಾತಾ, ಸುಬ್ಬೇಗೌಡ , ಆನಂದ್ ಗೌಡ, ಪ್ರದೀಪ್, ದರ್ಶನ್ ಗೌಡ, ಅಶೋಕ್ , ರಘು ಅರಸ್, ಪ್ರಭಾಕರ್, ರವೀಶ್, ರವಿ ನಾಯಕ್, ರಘು ಆಚಾರ್, ಮಹೇಶ್, ಪರಿಸರ ಚಂದ್ರು, ಚಂದ್ರಶೇಖರ್, ಸ್ವಾಮಿ, ನಾರಾಯಣಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.