ಇಸ್ಕಾನ್ ನಿಂದ‌ ಜ. 24 ರಂದು ಶ್ರೀ ಕೃಷ್ಣ ಬಲರಾಮರ ಭವ್ಯ ರಥಯಾತ್ರೆ

ಮೈಸೂರು: ಮೈಸೂರಿನ ಇಸ್ಕಾನ್ ಸಂಸ್ಥೆ ವತಿಯಿಂದ ಜನವರಿ 24 ರಂದು ಶ್ರೀ ಕೃಷ್ಣ ಬಲರಾಮರ ಭವ್ಯ ರಥಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಇಸ್ಕಾನ್ ಮೈಸೂರು ಉಪಾಧ್ಯಕ್ಷರಾದ ಕಾರಣ್ಯಸಾಗರ್ ದಾಸ ಹಾಗೂ ಸೌಮ್ಯ ರೂಪಕೃಷ್ಣ ದಾಸ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಜನವರಿ ೨೪ರಂದು ಸಂಜೆ 4.30 ಕ್ಕೆ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮಾಜಿ ಎಂಎಲ್ಸಿ ಗೋ. ಮಧುಸೂದನ ಸೇರಿದಂತೆ ಇಸ್ಕಾನ್ ಮೈಸೂರಿನ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ 5.30 ಕ್ಕೆ ಪೂಜೆ ನೆರವೇರಿಸಿದ ಬಳಿಕ, ಅನೇಕ ಭಕ್ತರಿಂದ ಹರಿನಾಮ ಸಂಕೀರ್ತನೆ ನಡೆಯುತ್ತಾ ರಥಯಾತ್ರೆ ಮುಖ್ಯ ರಸ್ತೆಗಳ ಮೂಲಕ ಸಾಗಲಿದೆ ಎಂದು ಅವರು ವಿವರಿಸಿದರು.

ಅದೇ ದಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಕೃಷ್ಣ,ಬಲರಾಮರ ರಥಯಾತ್ರೆಗೆ ಚಾಲನೆ ಸಿಗಲಿದೆ. ರಥಯಾತ್ರೆ ಗಾಂಧಿ ಚೌಕ, ಸಯ್ಯಾಜಿ ರಾವ್ ರಸ್ತೆ, ಚಿಕ್ಕ ಗಡಿಯಾರ ಗೋಪುರ, ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ಆರ್‌ಟಿಒ ವೃತ್ತ, ಬಲ್ಲಾಳ ವೃತ್ತ, ಹೊಸ ಕಂಠೀರವ ಅರಸ್ ರಸ್ತೆ ಹಾಗೂ ಜಯನಗರ 2 ನೇ ಮುಖ್ಯರಸ್ತೆ ಮೂಲಕ ಸಂಚರಿಸಿ ೧೮ನೇ ಕ್ರಾಸ್‌ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಸಮಾಪ್ತಿಗೊಳ್ಳಲಿದೆ.

ಇಸ್ಕಾನ್ ದೇವಾಲಯದ ಆವರಣದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ ಎಂದು ಕಾರಣ್ಯಸಾಗರ್ ದಾಸ ಹಾಗೂ ಸೌಮ್ಯ ರೂಪಕೃಷ್ಣ ದಾಸ ಅವರು ಮಾಹಿತಿ ನೀಡಿದರು.