ಸರ್ಕಾರಿ ಶಾಲೆಗಳ ಮುಚ್ಚಲು ಹೊರಟರೆ ಉಗ್ರ ಹೋರಾಟ

ಮೈಸೂರು: ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವುದು ಹಾಗೂ ಕೆಲವು ಆಸ್ಪತ್ರೆಗಳನ್ನು ಮುಚ್ಚುವ ಹುನ್ನಾರ ನಡೆದಿದ್ದು, ಇದು ರೈತರ, ಕೃಷಿ ಕೂಲಿ ಕಾರ್ಮಿಕರ ಮಕ್ಕಳ, ದಲಿತರ ಮಕ್ಕಳ ವಿರೋಧಿ ನೀತಿ ಎಂದು ರೈತ ಹಾಗೂ ವಿವಿಧ‌ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರ್ ನಾರಯಣ,ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಂಘದ ಎನ್ ರೇವಣ ಕೂರ್ಗಳ್ಳಿ,
ಎ ಐ ಡಿ ಎಸ್ ಒ ಸಂಘಟನ ಕಾರ್ಯದರ್ಶಿ
ನಿತೀನ್ ಮೈಸೂರು,ವಾರಿಪುರ ಚಂದ್ರ ಶೇಖರ್,ಆರ್ಯನ್ ಗಂಧದಗುಡಿ ಮತ್ತಿತರರು ಈ ಕುರಿತು ಮಾತನಾಡಿದರು.

ಸರ್ಕಾರ ಈ ನಿರ್ಧಾರವನ್ನು ನಾಳೆಯೊಳಗೆ ಹಿಂಪಡೆಯಬೇಕು. ಇಲ್ಲದಿದ್ದರೆ ಮೈಸೂರಲ್ಲಿ ಗಣರಾಜ್ಯೋತ್ಸವದ ದಿನದಂದು ಒಂದು ಕೈಯಲ್ಲಿ ರಾಷ್ಟ್ರ ಧ್ವಜ ಮತ್ತೊಂದು ಕೈಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಸರ್ಕಾರದ ನೀತಿಯನ್ನು ಖಂಡಿಸುತ್ತೇವೆ ಎಂದು ಎಚ್ಚರಿಸಿದರು.

ಈ ಹೋರಾಟಕ್ಕೆ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಂಘ, ಎ ಐ ಡಿ ಎನ್ ಒ ಸಂಘಟನೆ, ಗಂಧನಗುಡಿ ಫೌಂಡಷನ್, ಮೈಸೂರು ಕನ್ನಡ ಪರ ಸಂಘಟನೆಗಳು ನಾಡಿನ ಎಲ್ಲಾ ಶಿಕ್ಷಣ ಪ್ರೇಮಿಗಳು ನಮ್ಮ ಹೋರಾಟದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಏಕರೂಪ ಶಿಕ್ಷಣ ಜಾರಿಗೊಳಿಸಬೇಕು ಪ್ರತಿ ಗ್ರಾಮದಲ್ಲೂ ಎಲ್ ಕೆಜಿಯಿಂದ ಐದನೇ ತರಗತಿವರೆಗೂ ಮೂಲಭೂತ ಸೌಕರ್ಯಗಳನ್ನು ಗುಣಮಟ್ಟ ಶಿಕ್ಷಣ ಕೊಡಬೇಕು, ಪ್ರತಿ ಗ್ರಾಮ ಪಂಚಾಯತಿಯಲ್ಲೂ ನವೋದಯ ಮಾದರಿಯಲ್ಲಿ 5ನೇ ತರಗತಿಯಿಂದ ಪಿಯುಸಿ ವರೆಗೂ ವಸತಿ ಶಿಕ್ಷಣವನ್ನು ಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಚ್ಚರಿಕೆ ನೀಡಿದರು.