ಮೈಸೂರು: ಮೈಸೂರು ನಗರಪಾಲಿಕೆಯಲ್ಲಿ ಗೈರು ಹಾಜರಾಗಿದ್ದ ಪೌರಕಾರ್ಮಿಕರಿಗೆ ಹೆಚ್ಚವರಿ ವೇತನ ಮಂಜೂರು ಮಾಡಿ ಲಕ್ಷಾಂತರ ರೂ. ಭ್ರಷ್ಟಾಚಾರ ಮಾಡಿರುವ ಆರೋಪದ ಮೇರೆಗೆ ಮೂವರು ಮಹಿಳಾ ಸಿಬ್ಬಂದಿಗಳನ್ನು ಅಮಾನತ್ತು ಪಡಿಸಲಾಗಿದೆ.
ನಗರಪಾಲಿಕೆಯ ಆರೋಗ್ಯ ಶಾಖೆಯ ಪ್ರಥಮ ದರ್ಜೆ ಸಹಾಯಕಿಯರಾದ ಎಂ.ಪುಷ್ಪಾವತಿ, ಕೆ.ಎಲ್.ಸಿ. ಪಾಪ ಮತ್ತು ದ್ವಿತೀಯ ದರ್ಜೆ ಸಹಾಯಕಿ ಅನಿತಾ ಸಿ.ಹೆಚ್. ಅಮಾನತ್ತಿಗೆ ಒಳಗಾದ ಮಹಿಳಾ ಸಿಬ್ಬಂದಿಗಳು.
ನಗರಪಾಲಿಕೆ ವ್ತಾಪ್ತಿಗೆ ಬರುವ ಪೌರಕಾರ್ಮಿಕರಿಗೆ 2025ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗೈರು ಹಾಜರಾತಿಯ ದಿನಕ್ಕೂ ವೇತನ ನೀಡಿರುವಂತೆ ದಾಖಲೆ ಸೃಷ್ಟಿಸಿ 13,58, 575 ರೂ.ಗಳನ್ನು ವಂಚಿಸಿರುವುದು ತನಿಖೆಯಿಂದ ಸಾಬೀತಾದ ಹಿನ್ನಲೆಯಲ್ಲಿ ಈ ಮೂವರನ್ನು ಅಮಾನತ್ತು ಮಾಡಿ ಮೈಸೂರು ಮಹಾನಗರಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

