ಮೈಸೂರು: ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣ ವ್ಯಾಪ್ತಿಯ ಕೋರ್ಟ್ ಆವರಣದಲ್ಲಿ ಮನುಷ್ಯನ ಕಾಲು ಸಿಕ್ಕಿದ್ದು, ಕೆಲ ಕಾಲ ಆತಂಕ ಮೂಡಿಸಿತ್ತು.
ನಂತರ ಗೊಂದಲ,ಆತಂಕ ಬಗೆಹರಿದಿದೆ.
ರೈಲ್ವೆ ಆಕ್ಸಿಡೆಂಟ್ ನಲ್ಲಿ ಮೃತರಾಗಿದ್ದ ವ್ಯಕ್ತಿಯ ಕಾಲೊಂದನ್ನು ನಾಯಿ ಎತ್ತಿ ತಂದು ಕೋರ್ಟ್ ಆವರಣದಲ್ಲಿ ಬಿಸಾಕಿತ್ತು ಎಂದು ತಿಳಿದುಬಂದಿದೆ.
ವಿಷಯ ತಿಳಿದುರೈಲ್ವೆ ಪೊಲೀಸರು ಕಾಲನ್ನು ತೆಗೆದುಕೊಂಡು ಹೋಗಿದ್ದಾರೆ.
ಮೈಸೂರು ರೈಲ್ವೆ ಪೊಲೀಸರು ದೂರು ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

