ಬೆಳ್ಳಂಬೆಳಿಗ್ಗೆ ಯುವಕನ ಬರ್ಬರ ಹ*ತ್ಯೆ

ಮೈಸೂರು: ಬೆಳ್ಳಂಬೆಳಿಗ್ಗೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೌಸಿಯಾ ನಗರದ ನಿವಾಸಿ ಎಂ.ಡಿ ಶಹಬಾಜ್ (26)ಕಲೆಯಾದ ದುರ್ದೈವಿ.

ನಗರದ ಬೀಡಿ ಕಾಲೋನಿಯಲ್ಲಿ ಶಹಬಾಜ್ ನನ್ನು ಬೆಳ್ಳಂಬೆಳಿಗ್ಗೆ ಕೊಲೆ ಮಾಡಲಾಗಿದೆ ಎಂದು ಪೊಲೀ ಸರು ತಿಳಿಸಿದ್ದಾರೆ.

ಎಂ.ಡಿ ಶಹಬಾಜ್ ಫ್ಯಾಬ್ರಿಕ್ ಕೆಲಸ‌ ಮಾಡುವವನು.
ಜುಬೇರ್ ಮತ್ತು ಇತರರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ತನಿಖೆಯ ನಂತರ ಗೊತ್ತಾಗಲಿದೆ.

ಆರೋಪಿಗಳ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ಆದಷ್ಟು ಬೇಗ ಆರೋಪಿಗ ಳನ್ನು ಬಂಧಿಸಿ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ‌ಅಧಿಕಾರಿಗಳು ತಿಳಿಸಿದ್ದಾರೆ.