ಬೆಂಗಳೂರು: ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಹಾಗೂ ಮಾಜಿ ಅಧ್ಯಕ್ಷ ಎಸ್.ಕೆ. ಮರಿಗೌಡನ ಅಕ್ರಮಗಳನ್ನು ಇಡಿ ಬಯಲು ಮಾಡಿದೆ.
ಹಗರಣ ಬೆಳಕಿಗೆ ಬಂದಾಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಮರೀಗೌಡ ರಿಗೆ ಸೇರಿದ 6 ಅಕ್ರಮ ಮುಡಾ ನಿವೇಶಗಳು,
3 ಸ್ಥಿರ ಆಸ್ತಿ, ಒಂದು ವಾಣಿಜ್ಯ ಕಟ್ಟಡವನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಒಟ್ಟು 20.85 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಮಾಡಿಕೊಂಡಿದೆ.
ಇಡಿ ದಾಳಿ ವೇಳೆ ಬೆಳಕಿಗೆ ಬಂದಿರುವ ಮುಡಾ ಅಕ್ರಮ.ಆ ಅವಧಿಯಲ್ಕಿ ಅಧ್ಯಕ್ಷರಾಗಿದ್ದ ಮರೀಗೌಡರಿಗೆ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸಹಾಯ ಮಾಡಿ ಹಗರಣದಲ್ಲಿ ಸಿಲುಕಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

