ರಾಜಸ್ಥಾನ: ರಾಜಸ್ಥಾನದಲ್ಲಿ ಗಣರಾಜ್ಯೋತ್ಸವಕ್ಕೂ ಮುನ್ನ ಭಾರೀ ಪ್ರಮಾಣದ ಸ್ಪೋಟಕ ಪತ್ತೆಯಾಗಿದ್ದು, ಇಡೀ ದೇಶ ಬೆಚ್ಚಿಬಿದ್ದಿದೆ.
10 ಸಾವಿರ ಸ್ಪೋಟಕ ಸಾಮಗ್ರಿಗಳನ್ನು ವಶಪಡಿಸಿ ಕೊಳ್ಳಲಾಗಿದೆ. ರಾಜಸ್ಥಾನದ ನಾಗೌರ್ ಜಿಲ್ಲೆಯ ಕೃಷಿ ಜಮೀನಿನಲ್ಲಿ ಅಮೋನಿಯಂ ನೈಟ್ರೇಟ್, ಡಿಟೋ ನೇಟರ್ ವಶಪಡಿಸಿಕೊಳ್ಳಲಾಗಿದೆ. ಸುಲೇಮಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗಣರಾಜ್ಯೋತ್ಸವ ಆಚರಣೆ ಹಿಂದಿನ ದಿನ ರಾಜಸ್ಥಾನ ದ ನಾಗೌರ್ ಜಿಲ್ಲೆಯ ಪೊಲೀಸರು ಜಮೀನೊಂದರಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿ ದ್ದಾರೆ.
ಈ ಸಂಬಂಧ ಭಾನುವಾರ ವ್ಯಕ್ತಿಯನ್ನು ಬಂಧಿಸಿ, ತೀವ್ರ ತನಿಖೆಗೆ ಒಳಪಡಿಸಲಾಗಿದೆ.
ರಾಜಸ್ಥಾನ ಪೊಲೀಸರು ಶನಿವಾರ ತಡರಾತ್ರಿ ಹರ್ಸೌರ್ ಗ್ರಾಮದಲ್ಲಿ ದಾಳಿ ನಡೆಸಿದರು,ಗ್ರಾಮದ ಜಮೀನಿನಲ್ಲಿ 187 ಚೀಲಗಳಲ್ಲಿ ಸುಮಾರು10 ಸಾವಿರ ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ಮಾಹಿತಿ ನೀಡಿದ್ದಾರೆ.
ಅಮೋನಿಯಂ ನೈಟ್ರೇಟ್ ವಶಪಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಏಕೆಂದರೆ ಇದು ಈ ಹಿಂದೆ 2025 ರ ನವೆಂಬರ್‌ನಲ್ಲಿ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟ ಸೇರಿದಂತೆ ಪ್ರಮುಖ ಸ್ಫೋಟ ಪ್ರಕರಣಗಳಲ್ಲಿ ಬಳಕೆ ಮಾಡಲಾಗಿದೆ.
ಬಂಧಿತ ಸುಲೇಮಾನ್ ಖಾನ್ ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಈ ಹಿಂದೆ ಮೂರು ಕ್ರಿಮಿನಲ್ ಪ್ರಕರಣ ಗಳು ದಾಖಲಾಗಿವೆ ಎಂದು ಎಸ್ಪಿ ಹೇಳಿದರು.
ಪೊಲೀಸರು ಒಂಬತ್ತು ಪೆಟ್ಟಿಗೆ ಡಿಟೋನೇಟರ್‌ಗಳು, 12 ಪೆಟ್ಟಿಗೆಗಳು ಮತ್ತು 15 ಬಂಡಲ್ ನೀಲಿ ಫ್ಯೂಸ್ ವೈರ್, ಮತ್ತು 12 ಪೆಟ್ಟಿಗೆಗಳು ಮತ್ತು ಐದು ಬಂಡಲ್ ಕೆಂಪು ಫ್ಯೂಸ್ ವೈರ್ ಸೇರಿದಂತೆ ದೊಡ್ಡ ಪ್ರಮಾಣದ ಸ್ಫೋಟಕ ಪರಿಕರಗಳನ್ನು ಸಹ ವಶಪಡಿಸಿಕೊಂಡಿ ದ್ದಾರೆ.
ಆರೋಪಿಯು ಕಾನೂನುಬದ್ಧ ಮತ್ತು ಅಕ್ರಮ ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಸ್ಫೋಟಕಗಳನ್ನು ಪೂರೈಸುತ್ತಿದ್ದ ಎಂದು ಗೊತ್ತಾಗಿದೆ.

