ಇದ್ದು ಇಲ್ಲದಂತಾಯ್ತಾ ಚಾ.ನಗರ ಸಂಚಾರ ಠಾಣೆ..!?

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ..

ಚಾಮರಾಜನಗರ: ಪಟ್ಟಣದಲ್ಲಿ ದಿನೆ ದಿನೆ ವಾಹನಗಳ ದಟ್ಟಣೆ, ಸಂಚಾರ ಅಸ್ತವ್ಯಸ್ತತೆ ಹೆಚ್ಚಾಗುತ್ತಿದ್ದು ಕೆಲ ಸ್ಥಳಗಳು ಅಪಾಯದ ಸ್ಥಳಗಳಾಗಿ ಮುಂದೆ ಸಾವಿನ ಕೂಪಗಳಾಗುತ್ತ ಎಂಬ ಅನುಮಾನ ಮೂಡಿಸಲಾರಂಬಿಸಿದೆ‌.

ನಗರದ ಜೋಡಿರಸ್ತೆಯಲ್ಲಿ ಬಹುತೇಕ ವಾಹನಗಳು ಅಡ್ಡಾದಿಡ್ಡಿ ಪಾರ್ಕ್ ಮಾಡಿ ಸಮಸ್ಯೆ ಉಂಟುಮಾಡಿದರೆ ಕೆಲವು ವಿರುದ್ದ ದಿಕ್ಕಿನಲ್ಲಿ ಸಾಗುತ್ತಾ ಸರಿಯಾಗಿ ವಾಹನ ಚಲಾಯಿಸುವ ಸವಾರರಿಗೂ ಕಂಟಕರಾಗಿದ್ದಾರೆ.

ಜಿಲ್ಲಾಸ್ಪತ್ರೆ ಎದುರು ಖಾಸಗಿ ಶಾಲೆಗೆ ಬರುವ ಕೆಲ ಪೋಷಕರು ತರಾತುರಿಯಲ್ಲೆ ಶಿರಸ್ತ್ರಾಣ ಧರಿಸದೆ ವಿರುದ್ದ ದಿಕ್ಕಿನಲ್ಲಿ ಸಾಗಲಾರಂಬಿಸುತ್ತಾರೆ. ಎಸ್ಪಿ ಕಚೇರಿ ಮುಂಭಾಗವೆ ವಿರುದ್ದ ದಿಕ್ಕಿನಲ್ಲಿ ಸಾಗೊ ಜೊತೆಗೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡಲಾರಂಬಿಸುತ್ತಾರೆ. ಮತ್ತೊಂದೆಡ ಖಾಸಗಿ ಕಾಲೇಜಿಗೆ ಹೋಗುವ ಕೆಲ ಉಪನ್ಯಾಸಕರ ಸಮೇತ ವಿದ್ಯಾರ್ಥಿಗಳು ಪೋಷಕರು ವಿರುದ್ದ ದಿಕ್ಕಿನಲ್ಲಿ ಸಾಗುವುದು ಸಾಮಾನ್ಯವಾಗಿದೆ.

ಎಸ್ಪಿ ಕವಿತ ಮಾಡಿದ್ದೇನು!?;- ಹಿಂದಿನ ಎಸ್ಪಿ ಕವಿತಾ ಅವರು ಅಡ್ಡಾದಿಡ್ಡಿ ವಾಹನ ಚಲಾಯಿಸುವ ವಾಹನಗಳಿಗೆ ಪೊಟೊ ಹೊಡೆದು ಆಯಾ ಠಾಣಾ ವಾಟ್ಸಾಪ್ ಗ್ರೂಪ್ ಅಲ್ಲಿ ಅಪ್ಲೊಡ್ ಮಾಡಿ ವಾಹನ ಹುಡುಕಿ ದಂಡ ಹಾಕುವ, ಅಡ್ಡಾದಿಡ್ಡಿ ಪಾರ್ಕಿಂಗ್ ಅವರಿಗೆ ವ್ಹೀಲ್ ಲಾಕ್ ಮಾಡಿ ದಂಡ ಹಾಕುವ, ವಿರುದ್ದ ದಿಕ್ಕುಗಳಲ್ಲಿ ಸಾಗುವ ವಾಹನ ಸವಾರರಿಗೆ ದಂಡ ಹಾಕುವ, ಶಿರಸ್ತ್ರಾಣ ಧರಿಸದ ಪೋಷಕರಿಗೆ ಅರಿವು ಮೂಡಿಸುವ ಕಾಯಕ ಮಾಡಿದ್ದರು.ಮಿಗಿಲಾಗಿ ಅಪ್ರಾಪ್ತ ವಾಹನ ಚಾಲನೆ ಮಾಡುವ ಪೋಷಕರ ಕರೆದು ದಂಡ ಹಾಕದೆ ಅರಿವು ಮೂಡಿಸಿ ಮತ್ತೆ ಸಿಕ್ಕಿಬಿದ್ದರೆ ಪ್ರಕರಣ ದಾಖಲಿಸುವ ಸೂಚನೆ ನೀಡಿ‌ ಮಾನವೀಯತೆ ಮೆರೆದಿಧ್ದರು..
ದಂಡ ಹಾಕದೆ ವಾಹನ ಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾದ್ಯಮದವರಿಗೆ ಹೇಳಿದ್ದು ಹೀಗೆ…ಇಲ್ಲಿ ಎಲ್ಲರೂ ಶ್ರೀಮಂತರಲ್ಲ 25000 ದಂಡ ಹಾಕಿದರೆ ಪೋಷಕರ ಕಷ್ಟ ನಮಗೂ ತಿಳಿದಿದೆ ಹಾಗಂತ ಕ್ರಮವಹಿಸದೆ ಇರೋದ್ಕೂ ಆಗೊಲ್ಲ…ಅವಕಾಶ ಕೊಡೊಣ..ಮುಂದೆ ಸಿಕ್ಕರೆ ಪ್ರಕರಣ ದಾಖಲಿಸುವ ಸೂಚನೆ ಸಿಬ್ಬಂದಿಗೆ ನೀಡಿದ್ದೇವೆ ಎನ್ನುತ್ತಿದ್ದರು. ಎಸ್ಪಿ ಅವರ ಕಾರಿಗೆ ದ್ವಿಚಕ್ತ ವಾಹನ ಅಪಘಾತವಾದಾಗ ಪರಿಶೀಲನೆ ಮಾಡಿ ಅತಿವೇಗ , ಅನಾವಶ್ಯಕ ಪಾರ್ಕ್ ಸ್ಥಿತಿ ಅರಿತು ನಂತರದ ದಿನಗಳಲ್ಲಿ ಕ್ರಮವಹಿಸಲು ಸಂಚಾರ ಠಾಣೆಗೆ ಸೂಚಿಸಿದರು.

ತಮ್ಮ ಕಚೇರಿ ಮುಂಭಾಗವಿದ್ದ ಅಂಗಡಿ ಮಳಿಗೆಯೊಂದರ ವ್ವಯಸ್ಥಾಪಕರಿಗೆ ವ್ಯವಸ್ಥಿತವಾದ ಪಾರ್ಕಿಂಗ್ ಮತ್ತು ಸೆಕ್ಯೂರಿಟಿ ಗಾರ್ಡ್ ನೇಮಿಸಿಕೊಳ್ಳುವ ಬಗ್ಗೆ ನೋಟಿಸ್ ನೀಡಿದರು.

ನೋಟಿಸಿನಲ್ಲಿ ಏನಿತ್ತು.?, ಚಾಮರಾಜನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ತಮ್ಮ ಶಾಖೆಯನ್ನು ತೆರೆದಿದ್ದು, ನಿಮ್ಮ ಶಾಖೆಯ ಮುಂಭಾಗದ ಜೋಡಿ ರಸ್ತೆಯಲ್ಲಿ ತಮ್ಮ ಮಾರ್ಟ್‌ಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದ್ದರಿಂದ ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುತ್ತದೆ. ಆದ ಆದ ಕಾರಣ 05 ಸೆಕ್ಯೂರಿಟಿ ಗಾರ್ಡ್ನ್ನು ನೇಮಿಸಿಕೊಂಡು ತಮ್ಮ ಮಾರ್ಟ್‌ನ ಪಕ್ಕದಲ್ಲಿ ಪಾರ್ಕಿಂಗ್ ಜಾಗವನ್ನು ವ್ಯವಸ್ಥೆ ಮಾಡಿಕೊಂಡು ವ್ಯವಸ್ಥಿತವಾಗಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಕೋರಿದೆ. ಇಲ್ಲವಾದಲ್ಲಿ ನಿಮ್ಮ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಮೇಲೆ ಪಾರ್ಕಿಂಗ್ ವ್ಯವಸ್ಥೆ ಮಾಡಿ ಸಿಬ್ಬಂದಿ ನಿಯೋಜನೆ ಮಾಡಿಕೊಂಡಿದ್ದರು.
ಎಸ್ಪಿ ಕವಿತಾ ಅವರು ವರ್ಗಾವಣೆಯಾದ ನಂತರ ರಸ್ತೆ ನಿಯಮ ಉಲ್ಲಂಘನೆ ಮೀರಿದೆ.ವಿರುದ್ದ ದಿಕ್ಕಿನಲ್ಲಿ ಸಾಗುವ ಅಡ್ಡಾದಿಡ್ಡಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ.ಹಿರಿಯ ಪೊಲೀಸ್ .ಅದಿಕಾರಿಗಳಿಗೆ ಸಂಚಾರಲೋಪ ಎದುರಾದಾಗ ಬಸ್ಸಿಗೆ ದಂಡ ಹಾಕಿಸಿದ ಅದಿಕಾರಿಗಳು ಜನಸಾಮಾನ್ಯರು ದಿನ ದಟ್ಟಣೆ ಅನುಭವಿಸಿದರೂ ಮಾತಾಡದೆ ಮೌನವಾಗಿದ್ದಾರೆ. ತಮ್ಮ ವಾಹನಗಗಳಿಗೆ ಸುಗಮವಾಗಿ ಸಂಚಾರ ಮಾಡಲು ಸಿಬ್ಬಂದಿ ನಿಯೋಜನೆ ಮಾಡಿಕೊಂಡಿದ್ದಾರೆ.ಇದನ್ನ ನೋಡಿದ ಕೆಲ ಸಾರ್ವಜನಿಕಕರು ಖಾಸಗಿ ಅಂಗಡಿ ಮಳಿಗೆ ಕಾಯಲು ಪೊಲೀಸರನ್ನ ನಿಯೋಜಿಸಿಕೊಂಡಿದ್ದಾರೆಯೆ ಎಂಬ ಅನುಮಾನ ವ್ಯಕ್ತಪಡಿಸಲಾರಂಬಿಸಿದ್ದಾರೆ.
ಅದಿಕಾರಿಗಳು ಹಿಂದೆ ಎಸ್ಪಿ ಅವರ ಬಿಗಿಮುಷ್ಟಿಯಲ್ಲಿ ಕೆಲಸ ಮಾಡಿದ್ದಾದರೂ ಕಟ್ಟುನಿಟ್ಟಾಗಿ ಕೆಲಸ ಮಾಡಿಸುತ್ತಿದ್ದರು..ಇದೀಗ ಹೊಸದಾಗಿ ಬಂದ ಎಸ್ಪಿ ಅವರಿಗೆ ತಿಂಗಳಾಯಿತು..ಜೋಡಿ ರಸ್ತೆ ಇವರಿಗೆ ಚಿರಪರಿಚಿತವಾಯಿತು. ಮೊದಲು ಎಎಸ್ಪಿ ಆಗಿ ಇದ್ದಾಗ ಸಂಚಾರ ನಿಯಮಗಳಿಗೆ ಒತ್ತು ನೀಡಿದ್ದ ಇದೆ ಅದಿಕಾರಿಗಳು ಈಗ ತಹಬದಿಗೆ ತರೋದು ಕಷ್ಟವೇನಲ್ಲ..ಆದರೂ ದಟ್ಟನೆ ನಿರ್ವಹಣ ಮಾಡಲು ಹಲವು ಮಾರ್ಗೋಪಾಯಗಳನ್ನ
ರೂಪಿಸಬೇಕಾಗಿದೆ. ಇತ್ತೀಚೆಗೆ ಎಸ್ಪಿ ಕಚೇರಿ
ಸಮೀಪವೇ ವೈರ್ ಲೆಸ್ ವಿಭಾಗದ ಸಿಬ್ಬಂದಿ ಅಪಘಾತವಾಗಿ ಇನ್ನೂ ಚೇತರಿಕೆ ಕಾಣದೆ ಎದುರು ವಾಹನ ಸವಾರ ನಿರ್ಲ್ಯಕ್ಷ್ಯದಿಂದ ಪ್ರಜ್ಞಾಹೀನವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನೂ ಇಲಾಖೆ ಎಚ್ಚೆತ್ತದೆ ಹೋದರೆ ಪೊಲೀಸ್ ಇಲಾಖೆಯೊಳಗಿನ ಸಂಚಾರಿ ಠಾಣೆ ಇದ್ದು ಇಲ್ಲದಂತಾಗುತ್ದದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.