(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಗಡಿಜಿಲ್ಲೆಯು ಜಾನಪದ ಕಲೆಗಳ ತವರೂರಾಗಿದ್ದು, ಜಿಲ್ಲೆಯ ಸರ್ವತೋಮುಖ ಅಬಿವೃದ್ದಿಗೆ ಸರ್ಕಾರ ಬದ್ದವಾಗಿದೆ ಎಂದು ಉಸ್ತುವಾರಿ ಸಚಿವ ವೆಂಕಟೇಶ್ ಅವರು ಹೇಳಿದರು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ೭೭ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಪೊಲೀಸ್ ತುಕಡಿಗಗಳು ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಗಣರಾಜ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡಿದರು.
ದೇಶದ ಪ್ರಜಾಪ್ರಭುತ್ವ ಆಡಳಿತ ಪದ್ದತಿ ಅಳವಡಿಸಿಕೊಂಡ ಈ ದಿನ ಗಣರಾಜೊತ್ಸವ ದಿನವಾಗಿ ಆಚರಿಸುವ ಸಂಭ್ರಮದ ಹಿಂದೆ ಇರೊ ಹೋರಾಟ ಸಂಶೋದನೆ ಸ್ಮರಿಸುವ ನಿಟ್ಟಿನಲ್ಲಿ ಅದರ ರೂವಾರಿ ಅಂಬೇಡ್ಕರ್ ಕೊಡುಗೆ ನೆನಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಂವಿದಾನ ಮೌಲ್ಯ ಕಾರಣ ಇಂದು ಒಂದು ರಾಷ್ಟ್ರ, ಒಂದು ರಾಜ್ಯವಾಗಿ, ಒಂದು ಜಿಲ್ಲೆಯಾಗಿ ರೂಪುಗೊಳ್ಳುವಂತೆ ರಚನೆ ಮಾಡಲು ಒಂದು ಜಿಲ್ಲೆಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಗೆ ತನ್ನದೇ ಆದ ವೈಶಿಷ್ಟ್ಯವಿದ್ದು ದಾರ್ಮಿಕ ಕ್ಷೇತ್ರ,ಪ್ರವಾಸಿ ತಾಣ,ಅರಣ್ಯಸಂಪತ್ತು ಹೊಂದಿದ್ದು ಜಾನಪದ ಮಹಾಕಾವ್ಯ ಕೊಟ್ಟ ಜಿಲ್ಲೆ ನಮ್ಮದಾಗಿದೆ ನುಡಿದರು.
ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸೂಚಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾದಿಕಾರಿ ಶ್ರೀರೂಪ, ಎಸ್ಪಿ ಮುತ್ತುರಾಜು.ಸಿಇಒ ಮೊನೊ ರೊಥ್ ಹಾಗೂ ಜನಪ್ರತಿನಿದಿಗಳು ಹಾಜರಿದ್ದರು.

