(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಜಪ್ತಿಯಾದ ವಾಹನ ಬಿಡಿಸಿಕೊಳ್ಳಲು ಲಂಚದ ಬೇಡಿಕೆ ಇಟ್ಟಿದ್ದ ಮುಖ್ಯಪೇದೆ ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದಿದ್ದಾರೆ.
ಚಾಮರಾಜನಗರ ಸಂಚಾರಿ ಠಾಣೆಯ ಮುಖ್ಯಪೇದೆ ಮಲ್ಲು ಲೋಕ ಬಲೆಗೆ ಬಿದ್ದ ಪೇದೆ.
ಬಂಡಿಗೆರೆ ಗ್ರಾಮದ ದೂರುದಾರರೊಬ್ಬರು ಜಪ್ತಿಯಾಗಿದ್ದ ವಾಹನವನ್ನ ನ್ಯಾಯಾಲಯದ ಆದೇಶ ಮೇರೆಗೆ ಬಿಡಿಸಿಕೊಳ್ಳಲು ಇಚ್ಚಿಸಿದ್ದರು.ಆದರೆ ಮೂರು ಸಾವಿರ ಲಂಚದ ಬೇಡಿಕೆಯನ್ನ ಮುಖ್ಯಪೇದೆ ಮಲ್ಲು ಇಟ್ಟಿದ್ದರು.
ದೂರುದಾರರು ನೀಡಿದ ದೂರಿನ ಮೇರೆಗೆ ಸಂಚಾರಿ ಠಾಣೆಯಲ್ಲೆ ಹಣ ಸ್ವೀಕರಿಸುವಾಗ ಲೋಕಾಯುಕ್ತರ ಮುಖ್ಯಪೇದೆ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಡಿವೈಸ್ಪಿ ಹಾಗೂ ಸಿಬ್ಬಂದಿ ದಾಳಿ ಕಾರ್ಯದಲ್ಲಿ ಭಾಗವಹಿಸಿದ್ದರು.
೨೦೨೬ ರ ಹೊಸ ವರ್ಷದಲ್ಲಿ ಲೋಕಾಯುಕ್ತದಲ್ಲಿ ಮೊದಲ ಪ್ರಕರಣ ಇದಾಗಿದ್ದು ಎಸ್ಪಿ ಕವಿತಾ ಅವರ ವರ್ಗಾವಣೆ ನಂತರ ಹೊಸ ಎಸ್ಪಿ ಅವರ ಕಟ್ಟುನಿಟ್ಟಿನ, ಖಡಕ್ ಅದಿಕಾರ ಭಯದ ವಾತಾವರಣ ಇಲ್ಲದ ಹಿನ್ನಲೆ ಸಂಚಾರ ಠಾಣೆ ಸಿಬ್ಬಂದಿ ಬಲಿಯಾಗಿರುವುದು ನೋಡಿದಾಗ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟತೆಯ ಗಮಲು ಆರಂಭವಾಗಿದಿಯೇನೊ ಅನಿಸುತ್ತಿದೆ.
ಇತ್ತೀಚೆಗೆ ಸಂಚಾರಿ ಠಾಣೆಯವರು ಅಪ್ರಾಪ್ತ ಮಕ್ಕಳ ವಾಹನ ಚಾಲನೆಯಲ್ಲಿ ಸಿಕ್ಕಿಬಿದ್ದಾಗ ನ್ಯಾಯಾಲಯದಲ್ಲಿ ದೂರು ದಾಖಲಿಸದೆ ಠಾಣಾ ವಲಯದಲ್ಲಿ ಇತ್ಯರ್ಥ ಮಾಡುವ ಬಗ್ಗೆ ವ್ಯಾಪಕವಾಗಿ ದೂರು ಹಾಗೂ ನ್ಯಾಯಾಲಯದ ಆದೇಶ ಮೇರೆಗೆ ವಾಹನ ಬಿಡುಗಡೆಗೊಳಿಸಿಕೊಳ್ಳಲು ಠಾಣೆಯಲ್ಲಿ ಕೆಲ ಹಿರಿಯ ಅದಿಕಾರಿಗಳ ಮೇರೆಗೆ ಕೆಲ ಸಿಬ್ಬಂದಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ.
ಇದಕ್ಕೆ ಪೂರಕ ಎಂಬಂತೆ ಇಂದು ಮುಖ್ಯ ಪೇದೆ ಲೋಕಾಯುಕ್ತ ಅದಿಕಾರಿಗಳಿಗೆ ಸಿಕ್ಕಿಬಿಧ್ದಿರುವುದು ಗಮನಾರ್ಹವಾಗಿದೆ.

