ಬುದ್ಧಿ ಮಾಂದ್ಯಳ ಮೇಲೆ ಅತ್ಯಾಚಾರ ಯತ್ನ:ಆರೋಪಿಗೆ‌ 5 ವರ್ಷ ಕಠಿಣ ಶಿಕ್ಷೆ

ಚಾಮರಾಜನಗರ: ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ‌ ಯತ್ನ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಅಧಿಕ ಜಿಲ್ಲಾ ಮತ್ತು ಸತ್ರ‌ ಎಫ್ ಟಿ ಎಸ್ ಸಿ ವಿಶೇಷ ಪೋಕ್ಸೋ ನ್ಯಾಯಾಲಯದ ‌ನ್ತಾಯಾಧೀಶರು 5 ವರ್ಷ ಕಠಿಣ ಶಿಕ್ಷೆ ಮತ್ತು ‌5 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ನ್ಯಾಯಾಧೀಶರಾದ ಎಸ್. ಜಿ ಕೃಷ್ಣ ಅವರು ಈ‌ ತೀರ್ಪು ನೀಡಿದ್ದಾರೆ.

ಆರೋಪಿಯಾದ ಶಿವಮೂರ್ತಿ @ ಕರಿಯ ಎಂಬಾತ ನಿಗೆ ಶಿಕ್ಷೆ ವಿಧಿಸಲಾಗಿದೆ.

ಆರೋಪಿಯು ಬುದ್ದಿಮಾಂದ್ಯ ಮಹಿಳೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಮನೆಯೊಳಗಡೆ ಆಕೆಯ ವಿರುದ್ಧವಾಗಿ ಅತ್ಯಾಚಾರವೆಸಗಿರುವುದು ರುಜುವಾತಾಗಿದ್ದರಿಂದ ಶಿಕ್ಷೆ ವಿಧಿಸಲಾಗಿದೆ.

ಈ‌ ಬಗ್ಗೆ‌ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,

ಅರಕ್ಷಕ ನಿರೀಕ್ಷಕ ಜಿ.ಮಹೇಶ್ ತನಿಖೆ ಪೂರೈಸಿ
ದೋಶಾರೋಪ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದುದರಿಂದ ಆರೋಪಿತನಿಗೆ ಶಿಕ್ಷೆ ವಿಧಿಸಲಾಯಿತು.

ಕೆ.ಯೋಗೇಶ್ ಅವರು ಸರ್ಕಾರದ ಪರವಾಗಿ,ಆರೋಪಿತನ ವಿರುದ್ಧ ವಾದ ಮಂಡಿಸಿದರು.