ಮೈಸೂರು: ತಂಬಾಕು ಬೆಳೆಗಾರರಿಗೆ ಪೂರಕವಾಗುವ ರೀತಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಚ್ಚಾ ತಂಬಾಕು ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ರೈತರು ಬೆಳೆದ ಹೊಗೆಸೊಪ್ಪನ್ನು ಪರಿಶೀಲಿಸಿ ಮಾತನಾಡಿದ ಸಂಸದರು,ನಾವು
ಈಗಾಗಲೇ ಸಲ್ಲಿಸಿದ್ದ ಮನವಿಗೆ ಹಣಕಾಸು ಸಚಿವರು ಪುರಸ್ಕರಿಸಿ, ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಉತ್ಪಾದಿತವಲ್ಲದ ತಂಬಾಕಿನ (ಕಚ್ಚಾ) ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿ ಹಣಕಾಸು ಸಚಿವರು ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ ಎಂದು ಹೇಳಿದರು.
ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭಗೊಳ್ಳಲಿದೆ. ಇದರಿಂದ ತಂಬಾಕು ಬೆಳೆಗಾರರು ಮತ್ತು ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಚ್ಚಾ ತಂಬಾಕಿನ ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸುವ ಗೆಜೆಟ್ ಅಧಿಸೂಚನೆ ಹೊರಡಿಸಿರುವುದರಿಂದ ತಂಬಾಕು ಮಾರುಕಟ್ಟೆಗೆ ಸ್ಥಿರತೆಯನ್ನು ತರುವ ನಿರೀಕ್ಷೆಯಿದೆ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

