ಖಾಸಗಿ ವ್ಯಕ್ತಿಯ ಪಾಲಾದ ಅಲ್ಪ ಸಂಖ್ಯಾತ ಹಿಂದುಳಿದ ವರ್ಗದ ವಿಧ್ಯಾರ್ಥಿ ನಿಲಯದ ಜಾಗ

ಮೈಸೂರು: ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಇಲಾಖೆ ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿಧ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಮಾಡಲು 2010 ರಲ್ಲಿ ಮಂಜೂರಾದ ಜಾಗವನ್ನು ಖಾಸಗಿ ವ್ಯಕ್ತಿಗಳು ಪಾರ್ಕಿಂಗ್ ಜಾಗ ಮಾಡಿ ಟೀ,ಕಾಫಿ ಅಂಗಡಿ ಇಟ್ಟುಕೊಂಡಿದ್ದರೂ ಕೇಳುವವರೇ ಇಲ್ಲದಂತಾಗಿದೆ.

ಮೈಸೂರು ತಾಲೂಕು, ಕಸಬ ಹೋಬಳಿ,ಮೈಸೂರು ಗ್ರಾಮ ಸರ್ವೆ ನಂ.87 ರ 0.38 ಗುಂಟೆ ಜಾಗವನ್ನ 14-9-2010 ರಲ್ಲಿ ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಚೇರಿ ಅಧಿಕಾರಿಗಳು ವಿಧ್ಯಾರ್ಥಿ ನಿಲಯಕ್ಕಾಗಿ ಮಂಜೂರು ಮಾಡಿದ್ದರು.

ಮೈಸೂರು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಕ್ತಿಧಾಮದ ಮುಂಭಾಗ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣ ಇದಾಗಿದೆ.

ಚೆಕ್ಕುಬಂದಿ ಮಾಡಿ,ಬೌಂಡ್ರಿ ನಿಗದಿ ಪಡಿಸಿ ಜಾಗವನ್ನ ಹಸ್ತಾಂತರಿಸುವಂತೆ ತಹಸೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ.

ಈ ಆದೇಶವಾಗಿ ಈಗಾಗಲೇ 15 ವರ್ಷ ಕಳೆದರೂ ಸದರಿ ಜಾಗ ಖಾಸಗಿ ವ್ಯಕ್ತಿಗಳೆ ಇಟ್ಟುಕೊಂಡಿದ್ದಾರೆ.

ಈ ಜಾಗದಲ್ಲಿ ಮಹಾರಾಜರ ಅವಧಿಯಲ್ಲಿ ನಿರ್ಮಿಸಲಾದ ಒಂದು ಮಂಟಪವಿದೆ.ಇಡೀ ಪ್ರದೇಶವನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಖಾಸಗಿ ವ್ಯಕ್ತಿ ಖಾಸಗಿ ವಾಹನಗಳ ಪಾರ್ಕಿಂಗ್ ಹಾಗೂ ಟೀ ಅಂಗಡಿ ತೆರೆದು ಲಕ್ಷಾಂತರ ಹಣ ಪಡೆಯುತ್ತಿದ್ದಾನೆ.

ಈ ಬಗ್ಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳಾಗಲಿ ತಹಸೀಲ್ದಾರ್ ಆಗಲಿ ಚಕಾರ ಎತ್ತಿಲ್ಲ.ಏಕೆಂಬುದು ತಿಳಿಯದು.

ಕೋಟ್ಯಾಂತರ ಬೆಲೆಬಾಳುವ ಜಾಗ ದುರುಪಯೋಗವಾಗುತ್ತಿದ್ದರೂ ಕ್ರಮ ಕೈಗೊಳ್ಳದಿರುವುದು ದುರ್ದೈವ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದಲ್ಲೇ ಹಿಂದುಳಿದ ವರ್ಗದ ಜನಕ್ಕೆ ಅನ್ಯಾಯವಾಗುತ್ತಿದೆ.

ಈಗಲಾದರೂ‌ ಸಂಬಂಧಪಟ್ಟ ಅಧಿಕಾರಿಗಳು, ಈ‌ ಭಾಗದ ಜನಪ್ರತಿನಿಧಿಗಳು ಜಾಗವನ್ನ ವಶಕ್ಕೆ ಪಡೆದು ಉದ್ದೇಶಿತ ವಿಧ್ಯಾರ್ಥಿನಿಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿ.