ಮೈಸೂರು: ಮೈಸೂರು ಜಿಲ್ಲೆ ಅಪರಾಧ ಪತ್ತೆ ದಳ ಕಾರ್ಯಾಚರಣೆ ನಡೆಸಿ, ಕೇರಳಾ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.
ಅರುಣ್ ಕುಮಾರ್@ಅರುಣ್ ಹಾಗೂ ಸ್ವಾಮಿ ಬಂಧಿತ ಆರೋಪಿಗಳು.
ಆರೋಪಿಗಳಿಂದ ಒಟ್ಟು 55,200 ರೂ ಮೌಲ್ಯದ ಲಾಟರಿಗಳನ್ನ ಹಾಗೂ 22,930 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಡಿಷನಲ್ ಎಸ್ಪಿ ನಾಗೇಶ್ ರವರಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ಅಪರಾಧ ಪತ್ತೆ ದಳದ ಸಿಬ್ಬಂದಿ ಪಿರಿಯಾಪಟ್ಟಣದಲ್ಲಿ ಅಕ್ರಮವಾಗಿ ಕೇರಳಾ ರಾಜ್ಯದ ಲಾಟರಿ ಟಿಕೆಟ್ ಗಳನ್ನ ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.
ಪಿರಿಯಾಪಟ್ಟಣದ ವೆಂಕಟೇಶ್ವರ ವೇ ಬ್ರಿಡ್ಜ್ ಬಳಿ ಸೌದೆ ಡಿಪೋ ಹತ್ತಿರ ಅರುಣ್ ಎಂಬುವರು ಲಾಟರಿ ಮಾರಾಟ ಮಾಡುತ್ತಿದ್ದು ಸಿಕ್ಕಿಬಿದ್ದಿದ್ದಾರೆ.
ಅರುಣ್ ರಿಂದ 33 ಸಾವಿರ ಮೌಲ್ಯದ ಲಾಟರಿ ಟಿಕೆಟ್ ಹಾಗೂ 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪಿರಿಯಾಪಟ್ಟಣದ ಸಿಂಚನ ಹೋಟೆಲ್ ನಲ್ಲಿ ಸ್ವಾಮಿ ಎಂಬಾತ ಲಾಟರಿ ಮಾರುತ್ತಿದ್ದು ಸಿಕ್ಕಿಬಿದ್ದಿದ್ದಾನೆ.ಈತನಿಂದ 33 ಸಾವಿರ ಮೌಲ್ಯದ ಲಾಟರಿ ಟಿಕೆಟ್ ಗಳು ಹಾಗೂ 2930 ರೂ ನಗದು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ,ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್ ರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗೋವಿಂದರಾಜು ಹಾಗೂ ಪಿಎಸ್ಸೈ ಜಗದೀಶ್ ನೇತೃತ್ವದಲ್ಲಿ ಎಎಸ್ಸೈ ಸತೀಶ್ ಸಿಬ್ಬಂದಿಗಳಾದ ಅಬ್ದುಲ್ ಲತೀಫ್,ಅಶೋಕ್,ಭಾಸ್ಕರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

