ಆರೋಪಿಗಳ ಬಂಧನ:4 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಮೈಸೂರು: ಮೈಸೂರು ನಗರದಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡುವವರ ಮೇಲೆ ಮಂಡಿ ಠಾಣಾ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು,4 ಲಕ್ಷ ಮೌಲ್ಯದ 41.31 ಗ್ರಾಂ ಮಾದಕ ವಸ್ತು ಎಂ.ಡಿ.ಎಂ.ಎ ವಶಪಡಿಸಿಕೊಂಡಿ ದ್ದಾರೆ.

ಈ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿ ದ್ದಾರೆ.

ಆರೋಪಿಗಳಾದ ಎಂ. ಮೊಹಮ್ಮದ್ ಕರೀಂ ಅಲಿಯಾಸ್ ಕಾಲು ಹಾಗೂ ನಿಷಾದ್ ಪಾಷ ಎಂಬವರನ್ನು ಬಂಧಿಸಿ, ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

2ನೇ ಆರೋಪಿ ನಿಷಾದ್ ಪಾಷ ಎಂಬಾತನಿಗೆ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟ ಮಾಡಿ ತಲೆಮರೆಸಿ ಕೊಂಡಿದ್ದ‌ ಗೌಸಿಯಾನಗರದ ಆರೋಪಿ ಮೊಹಮ್ಮದ್ ರೋಷನ್ ಅಲಿಯಾಸ್ ಬೋಂಡಾ (22) ಎಂಬಾತನನ್ನು ದಸ್ತಗಿರಿ ಮಾಡಿ 4 ಲಕ್ಷ ರೂ ಮೌಲ್ಯದ 41.31 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿ ಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿಕೊಳ್ಳಲಾಗಿದೆ.

ಆರೋಪಿ ಮೊಹಮ್ಮದ್ ರೋಷನ್ ಮೇಲೆ ಉದಯ ಗಿರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ. ಎಸ್ ಪ್ರಕರಣಗಳು ದಾಖಲಾಗಿದೆ,ಈತ ಇನ್ಸ್ಟಾಗ್ರಾಂ ಮೂಲಕ ಅಪರಿಚಿತ ವ್ಯಕ್ತಿಯಿಂದ ಎಂ.ಡಿ.ಎಂ.ಎ ಅನ್ನು ಬೆಂಗಳೂರು ನಗರದಲ್ಲಿ ಪಡೆದು ನಂತರ ಅವನ್ನು ಮೈಸೂರಿನಲ್ಲಿ ಮಾರಾಟ ಮಾಡುತ್ತಿದ್ದುದು ತನಿಖೆಯಿಂದ ಗೊತ್ತಾಗಿದೆ.

ಕಾರ್ಯಾಚರಣೆಯಲ್ಲಿ ಮಂಡಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ದಿವಾಕರ್.ಆರ್, ಪಿ.ಎಸ್.ಐ ರಾಜು ಕೋನಕೇರಿ, ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿ ಪ್ರಶಂಸಿಸಿದ್ದಾರೆ.