6 ಲಕ್ಷ 35 ಸಾವಿರ ರೂ. ಮಾದಕ ವಸ್ತುಗಳ ವಶ

ಮೈಸೂರು: ಮೈಸೂರು ನಗರ ಸಿಸಿಬಿ ಪೊಲೀಸರು ಅಕ್ರಮ ಮಾದಕವಸ್ತು ಎಂ.ಡಿ.ಎಂ.ಎ ಹಾಗೂ ಗಾಂಜಾ ಪೂರೈಕೆ ಜಾಲದ ಮೇಲೆ ಕಾರ್ಯಾಚರಣೆ ನಡೆಸಿ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.

ಈ ವೇಳೆ 5.10 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಹಾಗೂ 1.25 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡು, ಬೆಂಗಳೂರು ಮೂಲದ ಮಾದಕ ವಸ್ತು ಪೂರೈಕೆ ಪೆಡ್ಲರ್ಗಳನ್ನು ಬಂಧಿಸಲಾಗಿದೆ.

ಮೈಸೂರು ನಗರಕ್ಕೆ ಮಾದಕವಸ್ತು ಪೂರೈಕೆ ಮಾಡುತ್ತಿದ್ದ ಬೆಂಗಳೂರಿನ ವಾಸಿಗಳಾದ ಆರೋಪಿ ಪ್ರಮೋದ್.ಆರ್ (27), ವಿಕಾಸ್.ಎಂ.( 23) ಬಂಧಿತ ಆರೋಪಿಗಳು.

ಮಾದಕವಸ್ತು ಎಂ.ಡಿ.ಎಂ.ಎ. ಹಾಗೂ ಗಾಂಜವನ್ನು ಬೆಂಗಳೂರು ಕಡೆಯಿಂದ ಮೈಸೂರು ನಗರಕ್ಕೆ ಪೂರೈಕೆ ಮಾಡುತ್ತಿದ್ದ ಜಾಲದ ಮೇಲೆ ಕ್ರಮ ಕೈಗೊಂಡು ನಗರದಲ್ಲಿ ಫೆ. 17 ರಂದು ಅಂದಾಜು 5,10,000 ರೂ ಮೌಲ್ಯದ 51 ಗ್ರಾಂ 83 ಮಿಲಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಮತ್ತು 1,25,000 ರೂ ಮೌಲ್ಯದ 2 ಕೆಜಿ 230 ಗ್ರಾಂ ಗಾಂಜಾ ಸೇರಿ ಒಟ್ಟು 6,35,000‌‌ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳು ಹಾಗೂ ಮಾದಕ ವಸ್ತುಗಳ ಸಾಗಾಟಕ್ಕೆ ಬಳಸುತ್ತಿದ್ದ 3 ಲಕ್ಷ ಮೌಲ್ಯದ ಹುಂಡೈ ಕಾರನ್ನು ಅಮಾನತ್ತುಪಡಿಸಲಾಗಿದೆ.

ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಸಿಸಿಬಿಯ ಎ.ಸಿ.ಪಿ. ಮಹಮ್ಮದ್ ಶರೀಫ್ರಾವುತರ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ಮತ್ತು ಪಿ.ಎಸ್.ಐ. ಗಳಾದ ಲೇಪಾಕ್ಷ.ಕೆ, ಜೋತ್ಸ್ನಾರಾಜ್, ರೇವಣಸಿದ್ದಪ್ಪ ಹಾಗೂ ಸಿಬ್ಬಂದಿಗಳಾದ ಮಧುಕುಮಾರ್, ಚೇತನ್, ರಾಜಾಸಾಬ್, ಯಶವಂತಕುಮಾರ್, ಕಿರಣ್ ರಾಥೋಡ್, ಸಂತೋಷ್ ಪವಾರ್, ಹಜರತ್ ಅಲಿ, ಸಮೀರ್, ಮಮತ ಮತ್ತು ಸಿದ್ದರಾಜು ಪಾಲ್ಗೊಮನಡಿದ್ದರು.

ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ ಪ್ರಶಂಸಿಸಿರುತ್ತಾರೆ.

ಮೈಸೂರು ನಗರದಲ್ಲಿ ಮಾದಕ ವಸ್ತು ಗಳ ಪೂರೈಕೆ, ಮಾರಾಟ, ಸಾಗಾಟ ಹಾಗೂ ಸೇವನೆ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಲು ಕೋರಿದ್ದಾರೆ.