ನಾಲ್ವರ ಬಂಧನ: 10,30,800 ರೂ ಬೆಲೆಯ ಎಂಡಿಎಂಎ ವಶ

ಮೈಸೂರು: ಮೈಸೂರು ನಗರದಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಸಿ.ಸಿ.ಬಿ. ಘಟಕ‌ ದಾಳಿ ನಡೆಸಿ 10,30,800 ರೂ ಬೆಲೆಯ ನಿಷೇ ಧಿತ ಮಾದಕವಸ್ತು ಎಂ.ಡಿ.ಎಂ.ಎ. ಮತ್ತು 8 ಲಕ್ಷ ಮೌಲ್ಯದ ಇನೋವಾ ಕಾರ್ ಅನ್ನು ಅಮಾನತ್ತುಪಡಿಸಿ ಕೊಂಡಿದ್ದಾರೆ.

ದಾಳಿ‌ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೈಸೂರಿನ ಗೌಸಿಯಾನಗರದ ಝಿಯಾವುಲ್ಲ(28), ಲಷ್ಕರ್ ಮೊಹಲ್ಲಾದ ಜಾವೀದ್ ಅಹಮದ್(46), ಗೌಸಿಯಾನಗರದ ಸುಹೇಲ್ ಪಾಷ(19), ಬೆಂಗಳೂ ರಿನ‌ ಪಾದರಾಯನಪುರದ ನುಹೇದ್ ಖಾನ್(23) ಎಂಬ ಆರೋಪಿಗಳು ಬಂಧಿತ ಆರೋಪಿಗಳು.

ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ಸಿಸಿಬಿ ಘಟಕದ ಎಸಿಪಿ ಮಹಮ್ಮದ್ ಶರೀಪ್ ರಾವುತರ್‌ ಅವರ ಮಾಹಿತಿಯ ಮೇರೆಗೆ ಪಿಐ ಶಬ್ಬಿರ್ ಹುಸೇನ್ ನೇತೃತ್ವದಲ್ಲಿ ಲೇಪಾಕ್ಷ.ಕೆ. ಜೋತ್ಸಾರಾಜ್.ಆರ್. ರೇವಣಸಿದ್ದಪ್ಪ ಹಾಗೂ ಸಿಬ್ಬಂದಿಗಳಾದ ಮಧುಕುಮಾರ್, ಚೇತನ್, ಅಧಾಮ್. ಕಿರಣ್ ರಾಥೋಡ್, ಸಂತೋಷ್ ಪವಾರ್, ಹಜ್ರತ್ ಅಲಿ, ರಾಜಾಸಾಬ್, ಸಮೀರ್, ಯಶ್ವಂತ್, ದೇವರಾಜು, ಮಮತ.ಎನ್.ಜಿ. ಹಾಗೂ ಸಿದ್ದರಾಜು, ಸುರೇಶ್‌ರವರು ಉಮ‌ರ್ ಖಾಯಂ ರಸ್ತೆಯಲ್ಲಿ ಇನ್ನೊವಾ ಕಾರನ್ನು ತಪಾಸಣೆ ಮಾಡಿದ್ದಾರೆ.

ತಪಾಸಣೆ ವೇಳೆ ಕಾರಿನಲ್ಲಿದ್ದ 4 ಮಂದಿಯನ್ನು ವಶಕ್ಕೆ ಪಡೆದು ಬೆಂಗಳೂರು ವಾಸಿ ನುಹೇದ್ ಬಾನ್‌ ಬಳಿ ಎಂ.ಡಿ.ಎಂ.ಎ. ಪೆಡ್ಲರ್ ಜಾವೀದ್‌ಗೆ ಸೇರಿದ 10.40,000 ರೂ ಮೌಲ್ಯದ ನಿಷೇಧಿತ ಮಾದಕವಸ್ತು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 8,00,000 ರೂ ಮೌಲ್ಯದ ಇನೋವಾ ಕಾರ್ ಹಾಗೂ 5 ಮೊಬೈಲ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ಅಮಾನತ್ತುಪಡಿಸಿ ಕೊಂಡಿದ್ದಾರೆ.

ಆರೋಪಿಗಳ ಸಮೇತ ವಶಪಡಿಸಿಕೊಂಡ ಮಾಲಗಳನ್ನು ಮಂಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವಶಕ್ಕೆ ನೀಡಿದ್ದು, ತನಿಖೆ ನಡೆಯುತ್ತಿದೆ.