ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾಫಿಯಾ ಮಿತಿ ಮೀರಿದ್ದು, ಬೆಂಗಳೂರಿಗರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಮಾಫಿಯಾವನ್ನು ಮಟ್ಟಹಾಕಲು ಸಿಸಿಬಿ ಮತ್ತು ಸ್ಥಳೀಯ ಪೊಲೀಸರು ಆಗಾಗ್ಗೆ ದಾಳಿ ಮಾಡಿ ಚುರುಕು ಮುಟ್ಟಿಸುತ್ತಲೇ ಇದ್ದಾರೆ.
ಸಿಸಿಬಿ ನಾರ್ಕೊಟಿಕ್ಸ್ ವಿಭಾಗ ಮಂಗಳವಾರ ಭರ್ಜರಿ ಕಾರ್ಯಾಚರಣೆ ನಡೆಸಿ,10 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಸ್ ಮಾಡಿ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಅಶ್ವಿನ್ (27), ಮೊಬಿನಾ (25) ಬಂಧಿತ ಆರೋಪಿಗಳು.
ಬಾಗಲೂರಿನ ಪ್ರೆಸ್ಟೀಜ್ ಫೈನ್ ಬೇಕರಿ ಪಾರ್ಕ್‌ನ ಫ್ಲಾಟ್ ವೊಂದರಲ್ಲಿ ಸಿಸಿಬಿ ನಾರ್ಕೊಟಿಕ್ಸ್ ತಂಡ 10 ಕೋಟಿ ರೂ. ಮೌಲ್ಯದ ಎಲ್ ಎಸ್ ಡಿ, ಹೈಡ್ರೋ ಗಾಂಜಾ, ಚರಸ್ ಜಪ್ತಿ ಮಾಡಿದೆ.
ಬಂಧಿತ ಆರೋಪಿಗಳಿಗೆ ಥೈಲ್ಯಾಂಡ್ ಮೂಲದ ವಿನ್ಸೆಟ್ ಆಗಾಗ್ಗೆ ಫ್ಲೈಟ್‌ನಲ್ಲಿ ಸ್ವಲ್ಪ ಸ್ವಲ್ಪ ಡ್ರಗ್ಸ್ ಕಳಿಸುತ್ತಿದ್ದ, ವಿನ್ಸೆಂಟ್ ಸೂಚಿಸುತ್ತಿದ್ದ ಜಾಗದಲ್ಲಿ ಅಶ್ವಿನ್ ಮತ್ತು ಮೊಬಿನ್ ಡ್ರಗ್ಸ್ ಕೊಟ್ಟು ಬರುತ್ತಿದ್ದರು.
ಹೀಗೆ ಪೆಡ್ಲಿಂಗ್ ಮಾಡುವುದನ್ನೇ ದಂಧೆ ಮಾಡಿಕೊಂ ಡಿದ್ದ ಇಬ್ಬರು ಆರೋಪಿಗಳು ಇದೀಗ ಕಂಬಿ ಎಣಿಸು ವಂತಾಗಿದೆ.
ಈ ಕಾರ್ಯಾಚರಣೆಯಲ್ಲಿ ನಮ್ಮ ರಾಜ್ಯದಲ್ಲಿ ಇದೇ ಮೊದಲು 8,335 ಎಲ್ ಎಸ್ ಡಿ ಸ್ಟ್ರಿಪ್ಸ್ ಪತ್ತೆಯಾ ಗಿದ್ದು, ಸಿಸಿಬಿ ಪೊಲೀಸರ ತಂಡ ಜಪ್ತಿ ಮಾಡಿದೆ.
1 ಎಲ್‌ಎಸ್‌ಡಿ ಸ್ಟ್ರಿಪ್ 6,000 ರೂ. ಬೆಲೆ ಬಾಳುತ್ತ ದಂತೆ. ಪೆಡ್ಲರ್‌ಗಳು ದೇವರ ಚಿತ್ರ ಸೇರಿದಂತೆ ವಿವಿಧ ಚಿತ್ರಕಲಾ ರೂಪದಲ್ಲಿ ಎಲ್ ಎಸ್ ಡಿ ಸ್ಟ್ರಿಪ್‌ಗಳನ್ನ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಇದರೊಂದಿಗೆ 534 ಗ್ರಾಂ ಚರಸ್, 5 ಕೆಜಿ ಹೈಡ್ರೋ ಗಾಂಜಾವನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿ ದ್ದಾರೆ.

