ಟ್ರೇಡಿಂಗ್ ನೆಪದಲ್ಲಿ ವೈದ್ಯರಿಗೆ 22 ಲಕ್ಷ ರೂ ವಂಚಿಸಿದ ಭೂಪ!

ಮೈಸೂರು: ಟ್ರೇಡಿಂಗ್ ನೆಪದಲ್ಲಿ ವೈದ್ಯರೊಬ್ಬರಿಗೆ 22 ಲಕ್ಷ ರೂ ವಂಚಿಸಿದ ಪ್ರಕರಣ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಜಯನಗರದ ನಿವಾಸಿ, ವೈದ್ಯರಾದ ಕಂಠೇಶ್ ಕೆ ಕಟ್ಟಿ ಎಂಬುವರ ವಂಚನೆಗೆ ಒಳಗಾಗಿದ್ದಾರೆ.ಅವರಿಗೆ ವಿಜಯ್ ಲೋದಾ ಎಂಬ ವ್ಯಕ್ತಿ ವಂಚಿಸಿದ್ದಾನೆ.

ಕಂಠೇಶ್ ಅವರನ್ನ ವಾಟ್ಸಾಪ್ ಗ್ರೂಪ್ ಗೆ ಸೇರಿಸಿ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಲಾಭಾಂಶ ಆಮಿಷ ತೋರಿಸಿ ಹಂತ ಹಂತವಾಗಿ 22 ಲಕ್ಷ ಹೂಡಿಕೆ ಮಾಡಿಸಿದ್ದಾನೆ.

ನಂತರ ಸೆಬಿ ತಮ್ಮ ಖಾತೆಯನ್ನ ಫ್ರೀಜ್ ಮಾಡಿದೆ ಡೆಪಾಸಿಟ್ ನ ಶೇ 40 ರಷ್ಟು ಹಣ ಪಾವತಿಸಿದರೆ ಹೂಡಿಕೆ ಹಣ ಬಿಡುಗಡೆ ಆಗುವುದಾಗಿ ಕಂಡಿಷನ್ ಹಾಕಿದ್ದಾನೆ.

ಆಗ ಕಂಠೇಶ್ ಅವರಿಗೆ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.ಕೂಡಲೇ ಅವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.