ಮೈಸೂರು: ಕ್ಷುಲ್ಲಕ ಕಾರಣಕ್ಕೆ ವಿಶೇಷ ಚೇತನ ಪತಿ ಮೇಲೆ ಪತ್ನಿ ತನ್ನ ತಾಯಿ ಜೊತೆ ಸೇರಿ ಹಲ್ಲೆ ನಡೆಸಿದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ನೊಂದ ಪತಿ ತನ್ನ ಪತ್ನಿ ಹಾಗೂ ಅತ್ತೆ ಮೇಲೆ ವಿರುದ್ಧ ದೂರು ದಾಖಲಿಸಿದ್ದಾರೆ.
ನವೀನಾ @ ನವ್ಯ ಹಾಗೂ ಅವರ ತಾಯಿ ಅನುಸೂಯ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಚೇತನ್ ಅವರು ಪ್ರಕರಣ ದಾಖಲಿಸಿದ್ದಾರೆ.
ಚೇತನ್ ಅರನ್ನ 30-05-2025 ರಂದು ನವೀನಾ ಕಾನೂನು ಬದ್ಧವಾಗಿ ವಿವಾಹವಾಗಿದ್ದಾರೆ.ಮದುವೆ ಆದ ಹೊಸದರಲ್ಲಿ ಪತಿ ಮೇಲೆ ಅನುಮಾನ ಪಡುವ ಹವ್ಯಾಸ ಬೆಳೆಸಿಕೊಂಡ ನವ್ಯ ಕ್ಷುಲ್ಲಕ ಕಾರಣ ನೀಡಿ ತವರು ಮನೆ ಸೇರಿಕೊಂಡಿದ್ದಾರೆ.
ಚೇತನ್ ವಿಶೇಷ ಚೇತನರಾಗಿರುವ ವಿಚಾರ ತಿಳಿದು ಮದುವೆ ಆಗಿದ್ದರೂ ಇದನ್ನೇ ಗುರಿಯಾಗಿಟ್ಟುಕೊಂಡು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ.
ಮಗನ ಸಂಸಾರ ಸರಿಪಡಿಸುವ ದೃಷ್ಟಿಯಿಂದ ತಂದೆ ಚೇತನ್ ಅವರನ್ನ ಸೊಸೆ ಮನೆಗೆ ಕರೆದುಕೊಂಡು ಹೋಗಿದ್ದಾಗ ಮಾತಿನ ಚಕಮಕಿ ನಡೆದಿದೆ.ನವ್ಯ ಹಾಗೂ ಆಕೆಯ ತಾಯಿ ಅನುಸೂಯ ಅವರು ತೆಂಗಿನಕಾಯಿ ತುರಿಯುವ ಕಟರ್ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ.
ಪತ್ನಿ ಹಾಗೂ ಅತ್ತೆ ಅನುಸೂಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚೇತನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಆದೇಶದಂತೆ ನವ್ಯ ಹಾಗೂ ತಾಯಿ ಅನುಸೂಯ ವಿರುದ್ಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

