ಮೈಸೂರು: ಮೈಸೂರು ಜಿಲ್ಲಾ ಪೊಲೀಸರು ಇದೇ ಜನವರಿಯಿಂದ ಫೆಬ್ರವರಿ ಮಾಹೆ ವರೆಗೆ 1 ಡಕಾಯಿತಿ,2 ಸುಲಿಗೆ,7 ಮನೆ ಕಳ್ಳತನ,5 ವಾಹನ ಕಳ್ಳತನ,8 ಸಾಮಾನ್ಯ ಕಳ್ಳತನ,1 ಜಾನುವಾರು ಪ್ರಕರಣಗಳನ್ನು ಹಚ್ಚಿ, ಒಟ್ಟು ರೂ. 29,97,788 ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಡಾ. ಬೋರಲಿಂಗಯ್ಯ, ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕರುಗಳಾದ ನಾಗೇಶ್ ಎಲ್, ಮಲ್ಲಿಕ್ ಸಿ, ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರಾಜಣ್ಣ ಟಿ.ಬಿ, ನಂಜನಗೂಡು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರಘು, ಜಿ.ಎಸ್, ಹುಣಸೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರವಿ ಅವರುಗಳ ಮಾರ್ಗದರ್ಶನದಲ್ಲಿ ಈ ಎಲ್ಲಾ ಕಾರ್ಯಾಚರಣೆ ನಡೆಯಿತು
ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಿನ್ನ ಮತ್ತು ಬೆಳ್ಳಿಯ ವಡವೆಗಳ ವಿವರ : ಒಟ್ಟು 9 ಪ್ರಕರಣಗಳಲ್ಲಿ 10,46,800 ರೂ ಮೌಲ್ಯದ 279 ಗ್ರಾಂ ಚಿನ್ನದ ಒಡವೆಗಳು ಮತ್ತು 1 ಪ್ರಕರಣದಲ್ಲಿ 30 ಗ್ರಾಂ ಬೆಳ್ಳಿಯ ಕಾಲು ಚೈನು ವಶಪಡಿಸಿಕೊಳ್ಳಲಾಗಿದೆ.
ನಗದು ಹಣದ ವಿವರ :ಒಟ್ಟು 5 ಪ್ರಕರಣಗಳಲ್ಲಿ 3,76,989 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಾಹನಗಳ ವಿವರ : ಒಟ್ಟು 6 ಪ್ರಕರಣಗಳಲ್ಲಿ ಕಾರು-3, ವ್ಯಾನ್ -1, ಮೋಟಾರ್ ಬೈಕ್ -4 ಒಟ್ಟು 8 ವಾಹನಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ 14,33,000 ರೂಗಳು.
ಹಾರ್ಡ್ ವೇರ್ ಮತ್ತು ಎಲೆಕ್ಟಿಕ್ ವಸ್ತುಗಳ ವಿವರ :ಒಟ್ಟು 3 ಪ್ರಕರಣಗಳಲ್ಲಿ ಮೋಟಾರ್, ಮೊಬೈಲ್ ಹಾಗೂ ವೈರ್ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 82,999 ರೂಗಳು.
ಪ್ರಾಣಿಗಳ ವಿವರ : 1 ಪ್ರಕರಣಗಳಲ್ಲಿ 2 ಹಸುಗಳು ಗಳನ್ನು ವಶಪಡಿಸಿಕೊಂಡಿದ್ದು, ಅಂದಾಜು ಮೌಲ್ಯ 58,000 ರೂ.
2026 ನೇ ಸಾಲಿನ ಜನವರಿ ಮಾಹೆಯಿಂದ ಮಾರ್ಚ್ ಮಾಹೆ ವರೆಗೆ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಒಟ್ಟು 55 ಪ್ರಕರಣಗಳನ್ನು ದಾಖಲಿಸಿ, 1 ಕೆ.ಜಿ. 860ಗ್ರಾಂ ಗಾಂಜಾ ಮತ್ತು ಎಂ.ಡಿ.ಎಂ.ಎ .010 ಎಂ.ಎಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, 56 ಜನರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.
ಇದೇ ಜನವರಿ ಮಾಹೆಯಿಂದ ಮಾರ್ಚ್ ಮಾಹೆ ವರೆಗೆ ಲಾಟರಿ ಕಾಯ್ದೆ ಅಡಿ ಒಟ್ಟು 14 ಪ್ರಕರಣಗಳನ್ನು ದಾಖಲಿಸಿ, 2,26,707 ರೂ ಮೊತ್ತದ ಲಾಟರಿ ಟಿಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

