ಜೂನಿಯರ್ ಅಭಿ ಆನೆ ಸಾವು

ಮೈಸೂರು: ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 23 ವರ್ಷದ ಜೂನಿಯರ್ ಅಭಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದ ಸಾಕಾನೆ ಜೂನಿಯರ್ ಅಭಿ(೨೧) ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಅಬಿ ಬಹಳ ಚೂಟಿ,ಚಾಣಾಕ್ಷ.ಹಾಗಾಗಿ ಕೂಂಬಿಂಗ್‌ನಲ್ಲಿ ಅಭಿಯನ್ನು ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿತ್ತು.

೮ ತಿಂಗಳ ಹಿಂದೆ ಕಾಡಿನಲ್ಲಿ ಮೇಯಲು ಬಿಟ್ಟಿದ್ದಾಗ ಗುಂಡಿಗೆ ಕಾಲು ಸಿಕ್ಕಿಕೊಂಡು ಮಂಡಿ ನೋವು ಮಾಡಿಕೊಂಡಿದ್ದ ಅಬಿ.

ಅಂದಿನಿಂದ ಸಾಕಾನೆ ಶಿಬಿರದಲ್ಲಿ ಪಶುವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡುತ್ತಿದ್ದರು. ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಕುಂಟುತ್ತಲೇ ಶಿಬಿರದಲ್ಲಿ ಅಡ್ಡಾಡುತ್ತಿದ್ದ.

ಕೆಲ ದಿನಗಳಿಂದ ನಡೆಯಲಾಗದೆ ಅಬಿ ಮಲಗೇಬಿಟ್ಟಿದ್ದ, ಹಾಗಾಗಿ ಮಲಗಿದ್ದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೂ ಮೃತಪಟ್ಟಿದೆ.

ವಿಷಯ ತಿಳಿದು ಡಿಸಿಎಫ್ ಸೀಮಾ, ಎಸಿಎಫ್ ಲಕ್ಷ್ಮೀಕಾಂತ್, ಆರ್‌ಎಫ್‌ಒ ದೇವರಾಜ್ ಭೇಟಿ ನೀಡಿ ಪರಿಶೀಲಿಸಿದರು.

ಪಶುವೈದ್ಯ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಆನೆಯ ಕಳೇಬರವನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.