ಮಂಡ್ಯ: ಮಂಡ್ಯ ಪೂರ್ವ ಹಾಗೂ ಪಶ್ಚಿಮ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ,ವಿವಿಧೆಡೆ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳ ಬಂಧಿಸಿದ್ದಾರೆ.
15 ಟಿವಿಎಸ್ ಎಕ್ಸ್ ಎಲ್ ಬೈಕ್ ಹಾಗೂ 12 ಡಿಯೋ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಎರಡು ಪ್ರತ್ಯೇಕ ಪ್ರಕರಣದಡಿ ಕೃತ್ಯದಲ್ಲಿ ಭಾಗಿಯದ ಆರೋಪಿಗಳನ್ನು ಬಂಧಿಸಲಾಗಿದೆ.
ಮಂಡ್ಯ ಹಾಗು ಮೈಸೂರು ಜಿಲ್ಲೆಯ ವಿವಿಧೆಡೆ ಬೈಕ್ ಗಳ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳರು ಈಗ ಕಂಬಿ ಎಣಿಸುತ್ತಿದ್ದಾರೆ.
ಮಂಡ್ಯದ ಪೂರ್ವ ಮತ್ತು ಪಶ್ವಿಮ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ
ಬಂಧಿತರಿಂದ 14 ಲಕ್ಷ ರೂ ಮೌಲ್ಯದ 27 ಬೈಕ್, 3 ಲಕ್ಷ ರೂ ಮೌಲ್ಯದ ಚಿನ್ನದ ಸರ ವಶ ಪಡಿಸಿಕೊಳ್ಳಲಾಗಿದೆ.
ಮಂಡ್ಯ ತಾ.ಕಾಗೇಹಳ್ಳದೊಡ್ಡಿಯ
ಚಂದ್ರಶೇಖರ್ 15ಕ್ಕೂ ಹೆಚ್ಚು ರೈತರ XL ಬೈಕ್ ಕದ್ದಿದ್ದ.
ರೈತರು ಮನೆ ಹಾಗೂ ಜಮೀನಿನ ಬಳಿ ಬೈಕ್ ಗಳನ್ನ ನಿಲ್ಲಿಸಿದ್ದ ಸಂದರ್ಭದಲ್ಲಿ ಸ್ಕೆಚ್ ಹಾಕಿ ಚಂದ್ರಶೇಖರ್ ಕಳವು ಮಾಡುತ್ತಿದ್ದ.
ಎಕ್ಸ್ ಎಲ್ ಬೈಕ್ ಗಳನ್ನೆ ಟಾರ್ಗೆಟ್ ಮಾಡಿ ಕದ್ದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಆರೋಪಿಯಿಂದ ಸುಮಾರು 5,75,000 ಮೌಲ್ಯದ 15 ಎಕ್ಸ್ ಎಲ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮೈಸೂರು ಜಿಲ್ಲೆಯ ರಿಹಾನ್ ಪಾಷ, ಸೈಯದ್ ಅಯಾನ್ ಹಾಗೂ ಅಪ್ರಾಪ್ತನೊಬ್ಬನನ್ನು ಬಂಧಿಸಲಾಗಿದೆ.
ಮೂವರು ಸೇರಿ ಸುಮಾರು 12 ಡಿಯೋ ಬೈಕ್ ಗಳನ್ನು ಕಳವು ಮಾಡಿದ್ದರು.
ಎರಡೂ ಪ್ರತ್ಯೇಕ ಪ್ರಕರಣದ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೊಇಭಾರಾಣಿ ತಂಡ ರಚಿಸಿದ್ದರು.
ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಶೇಷಾದ್ರಿಕುಮಾರ್, ಸಿಬ್ಬಂದಿಗಳಾದ ಲಿಂಗರಾಜು,ಉಮರ್, ರವಿಕಿರಣ್, ಶಿವಕುಮಾರ್ ಲೋಕೇಶ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಪ್ರಕರಣ ಬೇಧಿಸಿ ಮಾಲು ಜಪ್ತಿ ಮಾಡಿದ ಪೊಲೀಸರ ಕಾರ್ಯಕ್ಕೆ ಎಸ್ಪಿ ಡಾ.ಶೋಭಾರಾಣಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

