ವೃದ್ಧೆಯ ಕೊಂದು ಯುಜಿಡಿ ಗುಂಡಿಯಲ್ಲಿ ಹೂತು ಹಾಕಿದ ಪಾಪಿ!

ಮೈಸೂರು: ಹಣದಾಸೆಗೆ ವೃದ್ಧೆಯ ಕೊಲೆ
ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹೆಣ ಹೂತು ಹಾಕಿ ಆರೋಪಿ ಪರಾರಿಯಾದ ಘಟನೆ ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.

ವೀರಭದ್ರ ಕೊಲೆ ಮಾಡಿ ಹೂತು ಹಾಕಿದ್ದ ಆರೋಪಿ.

ಗೌರಮ್ಮ(90)ಎಂಬ ವಯೋವೃದ್ದೆಯನ್ನು ಕೊಲೆ ಮಾಡಲಾಗಿದೆ.

ವೀರಭದ್ರ ಗೌರಮ್ಮನ ಜೊತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಆಗಾಗ ಸಣ್ಣಪುಟ್ಟ ಕೆಲಸದಲ್ಲಿ ಸಹಾಯ ಮಾಡಿ ವಿಶ್ವಾಸಗಳಿಸಿಕೊಂಡಿದ್ದ.

ಈಗ್ಗೆ 15 ದಿನಗಳ ಹಿಂದೆ ಬ್ಯಾಂಕ್ ನಲ್ಲಿ 75 ಸಾವಿರ ಹಣ ಡ್ರಾ ಮಾಡಿಕೊಟ್ಟಿದ್ದ ವೀರಭದ್ರ
ಎರಡು ದಿನದಲ್ಲಿ ಹಣ ವಾಪಸ್ ನೀಡುತ್ತೇನೆ ಎಂದು ಹಣ ಪಡೆದು ಸತಾಯಿಸಿದ್ದ.

ಒಂದು ವಾರದ ಬಳಿಕ ಹಣ ಕೇಳಿದ್ದರಿಂದ ವೀರಭದ್ರ ಕೆರಳಿದ್ದ.ಆಕೆ ಒಬ್ಬರೇ ಇದ್ದಾಗ ಮನೆಗೆ ಹೋಗಿ ಉಸಿರುಗಟ್ಟಿಸಿ ಕೊಂದು ಯುಜಿಡಿ ಗುಂಡಿಗೆ ಹಾಕಿ ಪರಾರಿಯಾದ.

15 ದಿನಗಳಿಂದಲೂ ಗೌರಮ್ಮ ಹೊರಗೆ ಎಲ್ಲೂ ಕಾಣದ ಹಿನ್ನಲೆಯಲ್ಲಿ ಮಕ್ಕಳು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ವೇಳೆ ವೀರಭದ್ರ ಕೂಡ ಕಾಣೆಯಾಗಿದ್ದರಿಂದ‌ ಅನುಮಾನಗೊಂಡ ಪೊಲೀಸರು ಆತನ ಹಿಡಿಯಲು ಬಲೆ ಬೀಸಿದ್ದರು.

ಕಡೆಗೂ ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಪೊಲೀಸರ ಮುಂದೆ ವೀರಭದ್ರ ಸತ್ಯ ಒಪ್ಪಿಕೊಂಡಿದ್ದಾನೆ.

ಯುಜಿಡಿಯಿಂದ ಗೌರಮ್ಮನ ಮೃತ ದೇಹ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು ವೀರಭದ್ರ ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.