ಕಾರ್ ಡೀಲರ್ ಹತ್ಯೆ ಪ್ರಕರಣ;ಹಂತಕರು ಅರೆಸ್ಟ್

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಮೈಸೂರಿನ ಕಾರ್ ಡೀಲರ್ ಮೊಹಮದ್ ಸೋಹೆಬ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹಂತಕರನ್ನ ಪೊಲೀಸರು ಬಂಧಿಸಿದ್ದಾರೆ.

ಮೆ.3 ರಂದು ಶ್ರೀರಂಗಪಟ್ಟಣ ದಲ್ಲಿ ಮೈಸೂರು ಮೂಲದ ಮಹಮ್ಮದ್ ಸೋಹೇಬ್(22) ಎಂಬಾತನನ್ನು ಹತ್ಯೆ ಮಾಡಲಾಗಿತ್ತು.

ಡಿಸೆಂಬರ್ ತಿಂಗಳಲ್ಲಿ ಮೈಸೂರಿನ ಉದಯಗಿರಿಯಲ್ಲಿ ನಡೆದ ಸೋಫಿಯನ್ ಕೊಲೆ ಪ್ರಕರಣದಲ್ಲಿ ಮೃತ ಸೋಯೇಬ್ ಭಾಗಿಯಾಗಿದ್ದ.

ಹಾಗಾಗಿ ರಿವೇಂಜ್ ತೀರಿಸಿಕೊಳ್ಳಲು ಸೋಯೇಬ್ ಕೊಲೆ ಮಾಡಲು ಹಂತಕರು ಸಂಚು ಹಾಕಿದ್ದರು.

ಕಾರು ಮಾರಾಟ ಮಾಡುವ ನೆಪದಲ್ಲಿ ಗಂಜಾಮ್ ಗೆ ಮಾತುಕತೆಗೆ ಕರೆಸಿಕೊಂಡು ಸೋಯೇಬ್ ನನ್ನು ಹತ್ಯೆ ಮಾಡಿದ್ದಾರೆ.

ಈ ಮೊದಲೇ ಮೈಸೂರಿನಲ್ಲೇ ಎರಡು ಬಾರಿ ಕೊಲೆ ಮಾಡಲು ಪ್ರಯತ್ನಿಸಿದ್ದರು,ಆದರೆ ಮುಸ್ ಆಗಿತ್ತು.

ಕೊಲೆ ಹಂತಕರೆಲ್ಲರೂ ಮೈಸೂರಿನವರೇ,ಅಷ್ಟೇ ಅಲ್ಲಾ
ಕೊಲೆ ಮಾಡಿ ವಿಡಿಯೋ ಕೂಡಾ ಬಿಟ್ಟಿದ್ದರು.
ಮೃತ ಸೋಯೆಬ್ ಮೇಲೂ ಒಟ್ಟು 7 ಪ್ರಕರಣ ಇದೆ ಎಂದು ಸುದ್ದಿಗೋಷ್ಠಿಯಲ್ಲಿ
ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾಹಿತಿ ನೀಡಿದರು.

ಆರೋಪಿಗಳ ಪತ್ತೆಗೆ 3 ತಂಡ ರಚಿಸಲಾಗಿತ್ತು ನಮ್ಮ ತಂಡ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.