ಜಿಂಕೆ ರೀತಿ ಪ್ರಾಣಿ ಬೇಟೆಯಾಡಿದ ಮೂವರ ಬಂಧನ

ಮೈಸೂರು: ಜಿಂಕೆ ಜಾತಿಗೆ ಸೇರಿದ ಪ್ರಾಣಿಯನ್ನು ಬೇಟೆಯಾಡಿದ ಚನೈನ ಇಬ್ಬರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಆರೋಪಿಗಳಾದ ವೆಂಕಟರಮಣ(35) ಮೇಟೂರು ಗ್ರಾಮ, ಹೊಸಗಂಗೂರು ಸಮೀಪ, ಲಿಂಗದಹಳ್ಳಿ ಹೋಬಳಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ, ಕನ್ನಿಯಪ್ಪನ್ (25) ಕುಂಬಳೂರು ಗ್ರಾಮ, ಜಮಣಮತ್ತೂರು ತಾಲ್ಲೂಕು, ತಿರುವಣ್ಣಾಮಲೈ ಜಿಲ್ಲೆ, ತಮಿಳು ನಾಡು, ಸುರೇಶ (20) ವಲ್ಲಿಯೂರು, ಜಮಣಮತ್ತೂರು ತಾಲ್ಲೂಕು, ತಿರುವಣ್ಣಾಮಲೈ ಜಿಲ್ಲೆ, ತಮಿಳು ನಾಡು‌.ಈ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಅತ್ತಿಗುಂಡಿ ಗ್ರಾಮದಿಂದ ಮಲಗಾರು ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ದಾಳಿ ಮಾಡಿದ್ದು ಮೂರು ಮಂದಿ ಕೈಯಲ್ಲಿ ಬ್ಯಾಗ್, ದೊಣ್ಣೆ ಹಾಗೂ ಟಾರ್ಚ್ ಹೊಡಿದುಕೊಂಡು ಓಡಿಹೋಗುತ್ತಿದ್ದವರ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಒಂದು ಜಿಂಕೆ ಜಾತಿಗೆ ಸೇರಿದ ಪ್ರಾಣಿಯ ಕಳೆಬರಹ,ಬಿಳಿ ಬಣ್ಣದ ಬಟ್ಟೆ ಬ್ಯಾಗ್,2 ಹೆಡ್ ಲೈಟ್‌ ಗಳು,2 ಕಾಡು ಜಾತಿಯ ಮರದ ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪ ಮಹಾನಿರೀಕ್ಷಕರಾದ ಸಂಗೀತಾ. ಜಿ, ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ ನೆಲ್ಲೂರು ಅವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಬಾಬುದ್ದೀನ್ ಹಾಗೂ ಸಿಬ್ಬಂದಿಗಳಾದ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್, ಹೇಮಾವತಿ ಚಾಲಕರಾದ ತಿಮ್ಮಶೆಟ್ಟಿ ಪಾಲ್ಗೊಂಡಿದ್ದರು ‌

ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮಾಹಿತಿಯನ್ನು ನೀಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಚೇರಿ ಫೋನ್ ನಂ: 9480800220

ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಮೈಸೂರು ಕಚೇರಿ ಫೋನ್ ನಂ:9741209859

ಆರಕ್ಷಕ ಉಪ ನಿರೀಕ್ಷಕರು ಪೊಲೀಸ್ ಸಿಐಡಿ ಆರಣ್ಯ ಸಂಚಾರಿ ದಳ ಮೈಸೂರು ಇವರಿಗೆ ಮಾಹಿತಿ ನೀಡಬಹುದು.