ಗೌಜಲ ಹಕ್ಕಿ ಮಾರಾಟಕ್ಕೆ ಯತ್ನ: ವ್ಯಕ್ತಿ ಅರೆಸ್ಟ್

ಕೊಳ್ಳೇಗಾಲ: ರಸ್ತೆ ಬದಿಯಲ್ಲಿ ಗೌಜಲ ಹಕ್ಕಿಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಿಐಡಿ‌ ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದಾರೆ.

ಟಿ. ನರಸೀಪುರ ತಾಲೂಕು,ಮೇಧಿನಿ ಗ್ರಾಮದ ನಿವಾಸಿ ಮಾದೇಶ (43) ಬಂಧಿತ ಆರೋಪಿ.

ಖಚಿತ ಮಾಹಿತಿ ಆಧರಿಸಿ ಕೊಳ್ಳೆಗಾಲ ತಾಲೂಕಿನ ದಾಸನಪುರ ಗ್ರಾಮದ ಹೊರವಲಯದಲ್ಲಿ ರಸ್ತೆ ಬದಿಯಲ್ಲಿ ಗೌಜಲ ಹಕ್ಕಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು.

ಆತನ ಬಳಿ ಗೌಜಲ ಹಕ್ಕಿಗಳು ಇದ್ದುದು ಪತ್ತೆಯಾಗಿದೆ.

ತಕ್ಷಣ ದಾಳಿ ಮಾಡಿ ಆರೋಪಿಯನ್ನು ಮತ್ತು ಸೊತ್ತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ.

ಆರೋಪಿಯಿಂದ ಗೌಜಲ ಹಕ್ಕಿಗಳು, ಪಂಜರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಮಹಾನಿರೀಕ್ಷಕರು, ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್‌ ನೆಟ್ಟೂರು ಅವರ ಮಾರ್ಗದರ್ಶನದಲ್ಲಿ ಕೊಳ್ಳೆಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸು ಉಪನಿರೀಕ್ಷಕರಾದ ಅವಿನಾಶ್ ಹಾಗೂ ಸಿಬ್ಬಂದಿಗಳಾದ ಬಸವರಾಜ್, ಸ್ವಾಮಿ, ಜಮೀಲ್, ಲತಾ, ರಾಮಚಂದ್ರ, ಪ್ರಭಾಕರ್ ಮತ್ತು ಬಸವರಾಜ್ ಅವರು ಪಾಲ್ಗೊಂಡಿದ್ದರು.