ಚಾಮರಾಜನಗರ: ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು.ಎಂ ಅವರು ರೌಡಿ ಶೀಟರ್ ಗಳಿಗೆ ಕಡಕ್ ಎಚ್ಚರಿಕೆ ನೀಡಿದರು.
ಇಂದು ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಅವರು ರೌಡಿ ಆಸಾಮಿಗಳ ಪರೇಡ್ ನಡೆಸಿ, ಸುಮಾರು 250 ಕ್ಕೂ ಹೆಚ್ಚು ಜನ ರೌಡಿಶೀಟರ್‌ಗಳಿಗೆ ಕಠಿಣ ವಾರ್ನಿಂಗ್ ನೀಡಿದರು.
ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಹಾಗೂ ಸಾರ್ವಜನಿಕ ಶಾಂತಿಭಂಗ ಹಾಗೂ ನೆಮ್ಮದಿಗೆ ಧಕ್ಕೆಯಾಗುವಂತಹ ಕೃತ್ಯಗಳಲ್ಲಿ ಭಾಗವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುತ್ತುರಾಜ್ ಕ್ಲಾಸ್ ತೆಗೆದುಕೊಂಡರು.
ರೌಡಿ ಪರೇಡ್‌ನಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಎಂ.ಎನ್ ಶಶಿಧರ್ ಎರಡು ಉಪವಿಭಾಗದ ಡಿ.ಎಸ್.ಪಿಗಳು, ಎಲ್ಲಾ ಸಿಪಿ.ಐ, ಪಿ.ಐ ಹಾಗೂ ಪಿ.ಎಸ್.ಐ ಗಳು ಭಾಗವಹಿಸಿದ್ದರು.

