ಕೆಆರ್ ಪುರಂ ತ್ರಿವಳಿ ಕೊಲೆ ಪ್ರಕರಣ: ಪುದುಚೇರಿಯಲ್ಲಿ ಪಾತಕಿ ಶ್ವೇತಾ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಕೆಆರ್ ಪುರಂ ತ್ರಿಬಲ್ ಮರ್ಡರ್ ಪ್ರಕರಣದ ಕೊಲೆ ಪಾತಕಿ
ಅರೆಸ್ಟ್ ಆಗಿದ್ದಾಳೆ.

ಪುದುಚೇರಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾಳನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ತಂದೆ, ತಾಯಿ, ತಂಗಿಯನ್ನ ಕೊಲೆ ಮಾಡಿ ಲ ಶ್ವೇತಾ ಪ್ರಿಯರಕನೊಂದಿಗೆ ತಲೆಮರಿಸಿಕೊಂಡಿದ್ದಳು.

ಶ್ವೇತಾಳನ್ನು ಬಂಧಿಸಿರುವ ಪೊಲೀಸರು ಆಕೆಯ ಗೆಳೆಯ ಕೆನತ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಕೊಲೆ ನಡೆದ ಮನೆ ಶೋಧದ ವೇಳೆ ಶ್ವೇತಾ ಡೈರಿ ಪತ್ತೆಯಾಗಿದೆ. ಹಲವು ದಿನಗಳಿಂದ ಶ್ವೇತಾ ಡೈರಿ ಬರೆಯುತ್ತಿದ್ದಳು. ಡೈರಿಯಲ್ಲಿ ಐ ಆ್ಯಮ್ ಸ್ಯಾಡ್, ಐ ಆ್ಯಮ್ ಲೋನ್ಲಿ, ಫೀಲಿಂಗ್ ಲವ್ಡ್, ಐ ಆ್ಯಮ್ ಡಿಪ್ರೆಸ್ಡ್, ಐ ಆ್ಯಮ್ ಸೂಪಿರಿಯರ್ ಹೀಗೆ ಹಲವಾರು ಬರಹಗಳು ಪತ್ತೆಯಾಗಿದೆ.

ಪೊಲೀಸರು ಡೈರಿ ಸೇರಿದಂತೆ ಮನೆಯಲ್ಲಿ ಹಲವು ಸಾಕ್ಷಿಗಳ ಕಲೆ ಹಾಕಿದ್ದಾರೆ. ಕಳೆದ ಎರಡು ದಿನಗಳಿಂದ ಒಂದು ಕಡೆ ನಿಲ್ಲದೇ ಆರೋಪಿ ಶ್ವೇತಾ ಹಾಗೂ ಪ್ರಿಯಕರ ಕೆನತ್ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದರು.

ಇವರಿಬ್ಬರ ಪತ್ತೆಗಾಗಿ ವೈಟ್ ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿದ್ದವು.

ಶ್ವೇತಾ ಬಂಧನವಾಗಿದೆ, ಪ್ರಿಯಕರನ ಬಂಧನಕ್ಕೆ ಬಲೆ ಬೀಸಿದ್ದಾರೆ.