80ನೇ ಸ್ವಾತಂತ್ರ್ಯೋ ತ್ಸವ: ಮೈಸೂರಿನಲ್ಲಿ 80 ಕಪ್ಪು ಚುಕ್ಕೆ ನಿರ್ಮೂಲನಾ ಅಭಿಯಾನ

ಮೈಸೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿರುವ 80 ಕಪ್ಪು ಚುಕ್ಕೆ (ಜಿವಿಪಿ) ನಿರ್ಮೂಲನೆ ಅಭಿಯಾನದಡಿ ವಲಯ-3ರ ವಾರ್ಡ್ ನಂ.42ರ ಕೆ.ಜಿ.ಕೊಪ್ಪಲಿನ ಸಿದ್ದಪ್ಪಾಜಿ ದೇವಸ್ಥಾನದ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಮೋಹನ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಲಯ ಆಯುಕ್ತರು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್ ವೈಸರ್, ಮೇಸ್ತ್ರಿ, ಪೌರಕಾರ್ಮಿಕರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿ ಸ್ವಚ್ಛಗೊಳಿಸಿ,ಸುಮಾರು 10 ಟನ್ ತ್ಯಾಜ್ಯ ವಿಲೇವಾರಿ ಮಾಡಿದರು.