ಮೈಸೂರು: ಸುತ್ತೂರು ಶ್ರೀಮಠದಲ್ಲಿ ನಡೆಯುತ್ತಿರುವ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ 111ನೇ ಜಯಂತಿ ಅಂಗವಾಗಿ ಇಂದು ನಡೆದ ರೋಬೋಟ್ ಆನೆ ‘ರಾಬರ್ಟ್’ ಭವ್ಯ ಮೆರವಣಿಗೆಯನ್ನು ಸಾರ್ವಜನಿಕರು ಆರ್ಶ್ಚರ್ಯಚಿಕಿತರಾಗಿ ಕಣ್ತುಂಬಿಕೊಂಡರು.
ಈ ವೇಳೆ ಜೀವಂತ ಆನೆಯ ಬದಲು ರೋಬೋಟಿಕ್ ಆನೆ ಬಳಸಿ ವನ್ಯಜೀವಿ ಸಂರಕ್ಷಣೆ ಸಂದೇಶ ನೀಡಲಾಯಿತು.
ಚಿನ್ನದ ಅಂಬಾರಿ ಅಲಂಕಾರದಲ್ಲಿ ಮಹಾಸ್ವಾಮೀಜಿ ಅವರ ಭಾವಚಿತ್ರ ಹೊತ್ತ ರಾಬರ್ಟ್ ಆನೆ, ಸುತ್ತಲೂ ವರ್ಣರಂಜಿತ ಛತ್ರಿಗಳೊಂದಿಗೆ ಜೆಎಸ್ಎಸ್ ಕಾಲೇಜು, ಊಟಿ ರಸ್ತೆಯಿಂದ ಸುತ್ತೂರು ಶ್ರೀಮಠದವರೆಗೆ ಸಾಗಿ ಬಂದಿತು.
ನೂರಾರು ಭಕ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

