ಯೋಗದ ಮಹತ್ವ ಜನರಿಗೆ ತಲುಪಿಸುವಲ್ಲಿ ಶಿಕ್ಷಕರ ಸೇವೆ ಶ್ಲಾಘನೀಯ:ಪ್ರತಾಪ್ ಸಿಂಹ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಪ್ರತಾಪ್ ಸಿಂಹ ಅಭಿಮಾನಿಗಳ ಬಳಗ, ಚಾಮರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ನಗರದ ದಿವಾನ್ಸ್ ರಸ್ತೆಯಲ್ಲಿರುವ ಗ್ರೀನ್ ಹೆರಿಟೇಜ್ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ 76 ಯೋಗ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಯೋಗವು ಭಾರತದ ಪ್ರಾಚೀನ ಪರಂಪರೆಯಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯೋಗ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ಯೋಗ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಯೋಗದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶಿಕ್ಷಕರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಎನ್.ವಿ. ಫಣೀಶ್, ಸಿ.ವಿ. ಗೋಪಿನಾಥ್,
ಗಣೇಶ್ ಕುಮಾರ್, ಚಂದ್ರಶೇಖರ್, ಕಾರ್ಯಕ್ರಮದ ಆಯೋಜಕರಾದ ಆರ್. ಪರಮೇಶ್ ಗೌಡ, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಸಿ. ನಾರಾಯಣಗೌಡ, ವಸಂತ್ ಮನೀಶ್, ರಾಧಾಕೃಷ್ಣ, ಚೇತನ್, ಸತೀಶ್ ಗೌಡ, ಬೊ. ಉಮೇಶ್, ಎಸ್.ಕೆ. ದಿನೇಶ್, ಖುಷಿ, ರಾಘವೇಂದ್ರ, ಲೋಕೇಶ್, ಪ್ರಮೋದ್, ವಿನೋದ್ ಅರಸು, ಶ್ರೀನಿವಾಸ್, ಬಂಗಾರಿ, ಕಾಂತ, ನಿಖಿಲ್, ಯಶವಂತ್, ಸಂದೇಶ್ ಪವಾರ್, ಪಿಂಕಿ, ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.