ಬೆಂಗಳೂರು, ಅ.1: ಕರ್ನಾಟಕದಲ್ಲಿ 50-60 ಲಕ್ಷ ಮತದಾರರನ್ನು ಕೈಬಿಡಲು ಬಿಜೆಪಿ ಜೆಡಿಎಸ್ ನಾಯಕರು ಷಡ್ಯಂತ್ರ ನಡೆಸಿದ್ದಾರೆ ಎಂದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಿಎಂ,
ಫಾರಂ 7 ನಲ್ಲಿ ಮತದಾರರ ಹೆಸರು, ವಿಳಾಸ, ಎಪಿಕ್ ಸಂಖ್ಯೆ, ಸೇರಿ ಸಂಪೂರ್ಣ ಮಾಹಿತಿ ಮುದ್ರಿತ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಒಂದೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ 5 ಸಾವಿರದಿಂದ 10 ಸಾವಿರ ಫಾರಂ 7 ರ ಮೂಲಕ ಅರ್ಜಿ ಸಲ್ಲಿಕೆಯಾಗಿವೆ ಎಂದು ಹೇಳಿದರು.
ಮತ ಡಿಲೀಟ್ ಮಾಡಲು ಬಿಜೆಪಿಯ ಒಬ್ಬೊಬ್ಬ ಕಾರ್ಯಕರ್ತರು 80, 90, 150, 200 ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಈ ಷಡ್ಯಂತ್ರದ ಹಿಂದೆ ಇರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ತನಿಖೆಗೆ ಆದೇಶಿಸಬೇಕು. ಅಲ್ಲಿಯವರೆಗೂ ಚುನಾವಣಾ ಆಯೋಗ ಕಚೇರಿಯಿಂದ ನಾವು ಹೊರಬರುವುದಿಲ್ಲ ಎಂದು ಸಿಎಂ ಖಡಕ್ ಆಗಿ ಹೇಳಿದರು.
ಇಂದು ಸಚಿವ ಸಂಪುಟ ಸಭೆ ಇದೆ,ಆದರೆ ನಮಗೆ ಮತದಾರರ ಹಕ್ಕು ರಕ್ಷಣೆ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.
ಚುನಾವಣೆ ಗೆಲ್ಲಲಾಗದೆ, ಚುನಾವಣಾ ಆಯೋಗ, ಎಸ್ಐಆರ್ ಮೂಲಕ ಅಕ್ರಮಕ್ಕೆ ಮುಂದಾಗಿದ್ದಾರೆ,ಮುಖ್ಯ ಚುನಾವಣಾ ಆಯುಕ್ತರು ಜ್ಞಾನೇಶ್ ಕುಮಾರ್ ಅವರಿಗೆ ಮಾಹಿತಿ ಇಲ್ಲದೆ ಈ ಷಡ್ಯಂತ್ರ ನಡೆಯಲು ಸಾಧ್ಯವಿಲ್ಲ ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು.
ಬಡವರು, ಅಲ್ಪಸಂಖ್ಯಾತರ ಮತ ರಕ್ಷಣೆ ಮಾಡುವುದು ನನ್ನ ಕರ್ತವ್ಯ.
ಎಸ್ಐಆರ್ ದೇಶದ ದೊಡ್ಡ ಫ್ರಾಡ್,
ಎಸ್ಐಆರ್ ರದ್ದಾಗಬೇಕು ಎಂದು ಆಗ್ರಹಿಸಿದರು.
ಮತದಾರರ ಹಕ್ಕು ರಕ್ಷಣೆ ಚುನಾವಣಾ ಆಯೋಗದ ಕರ್ತವ್ಯ.
ಈ ಷಡ್ಯಂತ್ರದಲ್ಲಿ ಭಾಗಿಯಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು,
ಇದರಲ್ಲಿ ಭಾಗಿಯಾಗಿರುವವರು ಯಾರು, ಯಾವ ಪಕ್ಷದವರು ಎಂಬುದು ಬಹಿರಂಗವಾಗಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

