ಕ್ಯಾಪ್ಟನ್ ಅಭಿಮನ್ಯು ಅ.5ಕ್ಕೆ ಅರಮನೆಗೆ; ನಿಶಾನೆ ಆನೆಯಾಗಿ ಮಿಂಚಿಂಗ್

ಮೈಸೂರು:ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ಪ್ರಮುಖ ಆನೆ ಕ್ಯಾಪ್ಟನ್ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಜವಾಬ್ದಾರಿ ನಿರ್ವಹಿಸಿ ಮಿಂಚಲಿದ್ದಾನೆ.

ನಾಗರಹೊಳೆಯ ಮತ್ತಿಗೂಡು ಶಿಬಿರದಲ್ಲಿರುವ ಅಭಿಮನ್ಯು ಆರೋಗ್ಯವಾಗಿದ್ದು, ಅಕ್ಟೋಬರ್ 5ರಂದು ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದಾನೆ ಎಂದು ಡಿಸಿಎಫ್ ರವಿಶಂಕರ್ ತಿಳಿಸಿದರು.

ಅರಮನೆಗೆ ಬಂದ ಬಳಿಕ ಜನಸಂದಣಿ, ವಾದ್ಯಗೋಷ್ಠಿ ಮತ್ತು ಬಂದೋಬಸ್ತ್ ನಡುವೆ ನಡೆಯುವ ಮೆರವಣಿಗೆಗೆ ಹೊಂದಿಕೊಳ್ಳಲು ಅಭಿಮನ್ಯು ತಾಲೀಮಿನಲ್ಲಿ ಭಾಗವಹಿಸಲಿದ್ದಾನೆ.

ಅಭಿಮನ್ಯು ಸೇರಿದಂತೆ ಎಲ್ಲಾ ದಸರಾ ಆನೆಗಳ ಆರೋಗ್ಯದ ಮೇಲೆ ಅರಣ್ಯ ಇಲಾಖೆ ಮತ್ತು ಪಶುವೈದ್ಯರ ತಂಡ ವಿಶೇಷ ನಿಗಾ ವಹಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.