ಅತಂಕಕ್ಕೆ ಎಡೆ ಮಾಡಿದ ನಾಡಹಬ್ಬ ದಸರಾದಲ್ಲಿ ಮತ್ತೊಂದು ಅವಘಡ

ಮೈಸೂರು: ನಾಡಹಬ್ಬ ದಸರಾದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು ಅಸತಂಕಕ್ಕೆ ಎಡೆ ಮಾಡಿದೆ.

ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಟಾರ್ಚ್ ಲೈಟ್ ಪರೇಡ್ ರಿಹರ್ಸಲ್ ವೇಳೆ ಬೈಕ್ ಅಪಘಾತ ಸಂಭವಿಸಿದ್ದು ಇಬ್ಬರು ಸವಾರರು ಗಾಯಗೊಂಡಿದ್ದಾರೆ.

ಪಂಜಿನ ಕವಾಯತು ಮೈದಾನದಲ್ಲಿ ಪೊಲೀಸರ ಸಶಸ್ತ್ರ ಪೊಲೀಸ್ ಮೋಟಾರ್ ಸೈಕಲ್ ಪ್ರದರ್ಶನದ ತಾಲೀಮು ನಡೆಯುತ್ತಿತ್ತು.

ಬೈಕ್ ಕಸರತ್ತು ನಡೆಯುವ ವೇಳೆಯೇ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿವೆ,ಈ ಅವಘಡದಲ್ಲಿ ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಅಪಘಾತವಾದ ಕೂಡಲೇ ತಾಲೀಮನ್ನು ಅರ್ಧಕ್ಕೆ ಮೊಟಕುಗೊಳಿಸಿ ಪೊಲೀಸರು ಹೊರ ನಡೆದಿದ್ದಾರೆ. ನಾಳೆ ಸಂಜೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ರಿಹರ್ಸಲ್ ನಡೆಯಬೇಕಿತ್ತು.

ದಸರಾ ಸಂದರ್ಭದಲ್ಲಿ ಸತತ ಅವಘಡಗಳು ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.