ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ತವರೂರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಕ್ತಿ, ಶ್ರದ್ಧೆ ಮತ್ತು ಆಧ್ಯಾತ್ಮಿಕತೆಯ ಅಪೂರ್ವ ಕ್ಷಣಗಳು ಅನಾವರಣಗೊಂಡವು.

ಕರ್ನಾಟಕದ ರಾಜ್ಯಪಾಲ ರಾದ ಡಾ. ಸುಧಾ ಯಾದವ್ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ತಾಯಿ ಚಾಮುಂಡೇಶ್ವರಿಯ ದಿವ್ಯ ಆಶೀರ್ವಾದ ಪಡೆದರು.
ಮೈಸೂರಿನ ಆರಾಧ್ಯ ದೇವತೆ, ಶಕ್ತಿ ಸ್ವರೂಪಿಣಿ ತಾಯಿಯ ಸನ್ನಿಧಿಯಲ್ಲಿ ರಾಜ್ಯದ ಜನರ ಸೇವೆಯ ಪವಿತ್ರ ಹೊಣೆಗಾರಿಕೆಯನ್ನು ಸಮರ್ಪಣಾಭಾವದಿಂದ ನಿರ್ವಹಿಸಲು ಆಶೀರ್ವಾದ ಕೋರಿದರು.
ನಂತರ ಮೈಸೂರಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು.

