ತುಮಕೂರು: ಬಿಜೆಪಿ ಸರ್ಕಾರದ ಆಡಳಿತ ಸರಿಯಿಲ್ಲ ಎಂಬ ಸಂದೇಶವನ್ನು ಶಿರಾ ಕ್ಷೇತ್ರದ ಮಹಾಜನತೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಶಿರಾ ಕ್ಷೇತ್ರದಲ್ಲಿ ಮಂಗಳವಾರ ಡಿಕೆಶಿ ಮತ ಪ್ರಚಾರ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜಯಚಂದ್ರ ಅವರು ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗಾಗಿ ಜನರು ಅವರಿಗೆ ಮತ ನೀಡಲಿದ್ದಾರೆಂದರು.
ವಿಧಾನಸೌಧದಲ್ಲಿ ಶಿರಾ ಕ್ಷೇತ್ರದ ಪ್ರತಿನಿಧಿ ಸ್ಥಾನದಲ್ಲಿ ಯಾರು ಕೂತು ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಗಮನಿಸಿ ಆಯ್ಕೆ ಮಾಡುತ್ತಾರೆಂದು ಡಿಕೆಶಿ ಹೇಳಿದರು.
ನಾವು ಬೇರೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ನಾಯಕರ ಬಗ್ಗೆ ಅವರದೇ ಪಕ್ಷದ ನಾಯಕರು ಯಾವ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂಬುದನ್ನು ನೋಡಿಕೊಂಡು ಅದನ್ನು ಸರಿಪಡಿಸಿಕೊಳ್ಳಲಿ. ಸಿ.ಟಿ ರವಿ ಅವರ ಹೇಳಿಕೆಗೆ ಉತ್ತರ ಕೊಡುವುದೇನಿಲ್ಲವೆಂದು ಡಿಕೆಶಿ ಮಾರ್ಮಿಕವಾಗಿ ನುಡಿದರು.
ಶಿರಾ ಕ್ಷೇತ್ರದಲ್ಲಿ ಯುವ ಸಮುದಾಯದಿಂದ ಹಿಡಿದು ಎಲ್ಲ ವರ್ಗದವರು ನಮಗೆ ತೋರಿಸುತ್ತಿರುವ ಪ್ರೀತಿ ಅಭಿಮಾನ, ದೇಶ ಮತ್ತು ರಾಜ್ಯಕ್ಕೆ ಉತ್ತಮ ಸಂದೇಶ ಕೊಡುತ್ತಿದೆ ಎಂದು ಡಿಕೆಶಿ ಹೇಳಿದರು.
ಕಳೆದ 15 ತಿಂಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ರೈತರಿಗಾಗಲಿ, ಕಾರ್ಮಿಕರಿಗಾಗಲಿ, ವರ್ತಕರಿಗಾಗಲಿ, ಶ್ರಮಿಕರಿಗಾಗಲಿ ಶೇ. 5ರಷ್ಟು ಸಹಾಯವಾಗಿಲ್ಲ. ಎಲ್ಲ ವರ್ಗದವರನ್ನು ಕೇಳಿದ್ದೇನೆ. ಎಲ್ಲರೂ ತಮಗೆ ಪರಿಹಾರ ಸಿಕ್ಕಿಲ್ಲ ಅಂತಿದ್ದಾರೆಂದು ಡಿಕೆ ಶಿವಕುಮಾರ ತಿಳಿಸಿದರು.
ಬಿಜೆಪಿ ಆಡಳಿತ ಸರಿಯಿಲ್ಲವೆಂಬ ಸಂದೇಶ ಶಿರಾ ಜನ ನೀಡಲಿದ್ದಾರೆ -ಡಿಕೆಶಿ

