ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ.
ಭಾರತೀಯ ಸೇನಾಪಡೆ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಪ್ರತಿ ದಾಳಿ ನಡೆಸಿದ್ದು, ಇದರಿಂದ ಎರಡರಿಂದ ಮೂರು ಪಾಕ್ ಸೇನೆಯ ಎಸ್ ಎಸ್ ಜಿ ಕಮಾಂಡೋ ಸೇರಿದಂತೆ 8 ಮಂದಿ ಸೈನಿಕರು ಹತರಾಗಿದ್ದಾರೆ.
ಈ ಘಟನೆಯಲ್ಲಿ 10-12 ಪಾಕ್ ಯೋಧರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಪಾಕ್ ಸೇನೆಯ ಬಂಕರ್ ಗಳು, ಇಂಧನ ಡಂಪಿಂಗ್ ಮತ್ತು ಕಾರ್ಯಸ್ಥಳವನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.
ನೆರೆಯ ರಾಷ್ಟ್ರದಿಂದ ಕದನ ವಿರಾಮ ಉಲ್ಲಂಘನೆ ಹಾಗೂ ಪಾಕ್ ಮೂಲದ ಉಗ್ರರ ಒಳನಸುಳುವಿಕೆ ತಡೆಯುವ ಯತ್ನದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಭಾರತೀಯ ಸೇನೆ ಪ್ರತಿದಾಳಿಯಲ್ಲಿ ಪಾಕ್ ಯೋಧರ ಹತ್ಯೆ

