ಬೆಂಗಳೂರು: ಯಾರು ಏನೇ ಮಾಡಿದರೂ ಡಿ. ಕರ್ನಾಟಕ ಬಂದ್ ನಿಲ್ಲಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಡಿ. 5ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ಆಗುವುದು ನಿಶ್ಚಿತ ಎಂದು ಅವರು ತಿಳಿಸಿದರು.
ಬಸ್, ಆಟೋ, ಕಾರು, ಓಲಾ-ಊಬರ್ ಇತರೆ ವಾಹನಗಳು ಡಿಸೆಂಬರ್ 5ರಂದು ಸಂಚಾರ ನಿಲ್ಲಿಸಬೇಕು. ಇದು ಕನ್ನಡಿಗರ ಅಸ್ಮಿತೆಯ ಪ್ರಶ್ನೆಯಾದ್ದರಿಂದ ಎಲ್ಲರೂ ಬಂದ್ ಗೆ ಬೆಂಬಲ ಕೊಡಬೇಕು ಎಂದು ಅವರು ಮನವಿ ಮಾಡಿದರು.
ಡಿ. 5ರಂದು ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಎಂದು ಅವರು ತಿಳಿಸಿ, ನ. 26ರಂದು ಅತ್ತಿಬೆಲೆ ಗಡಿ ಬಂದ್ ಮಾಡಲಿದ್ದೇವೆ. ನ. 28, ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಸರ್ಕಾರ ನಮ್ಮ ಮೇಲೆ ಕೇಸ್ ಹಾಕಲು ತಯಾರಿ ಮಾಡುತ್ತಿದ್ದಾರೆ. ಯಾವ ಕೇಸ್ ಹಾಕಿದರೂ, ನಮ್ಮನ್ನ ಜೈಲಿಗೆ ಕಳುಹಿಸಿದರೂ ನಮ್ಮ ಹೋರಾಟ ಮತ್ತು ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.
ಯಾರನ್ನ ಕೇಳಿ ಮರಾಠಾ ಅಭಿವೃದ್ಧಿ ನಿಗಮ ರಚನೆ ಮಾಡಿದಿರಿ? ಸರ್ವಪಕ್ಷ ಸಭೆ ಕರೆದಿಲ್ಲ, ವಿಧಾನಸಭೆಯಲ್ಲೂ ಚರ್ಚೆ ಮಾಡಲಿಲ್ಲ. ಏಕಾಏಕಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಪ್ರಾಧಿಕಾರ ರಚನೆ ಹಿಂಪಡೆಯಲು ನ. 30ರವರೆಗೂ ಗಡುವು ನೀಡಿದ್ದೇವೆ. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡುವುದು ನಿಶ್ಚಿತ ಎಂದರು.
ಯಾರು ಏನೇ ಮಾಡಿದರೂ ಕರ್ನಾಟಕ ಬಂದ್ ನಿಲ್ಲಲ್ಲ -ವಾಟಾಳ್ ನಾಗರಾಜ್

