ಮೈಸೂರು: ಹೆಚ್.ವಿಶ್ವನಾಥ್ ಗೆ ಇದು ದೇವರು ಕೊಟ್ಟ ಶಿಕ್ಷೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ನಗರದಲ್ಲಿ ಸಾ.ರಾ. ಮಹೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನ್ಯಾಯ ದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಾಗಿದೆ. ಹೆಚ್.ವಿಶ್ವನಾಥ್ ಗೆ ಇದು ದೇವರು ಕೊಟ್ಟ ಶಿಕ್ಷೆ. ನಾವು ಜೆಡಿಎಸ್ ಕಾರ್ಯಕರ್ತರು ನಿಟ್ಟುಸಿರು ಬಿಟ್ಟಿದ್ದೇವೆ. ಆಣೆ ಪ್ರಮಾಣ ನಡೆದ ಒಂದೇ ವರ್ಷಕ್ಕೆ ಸತ್ಯ ಯಾವುದೆಂದು ತೀರ್ಮಾನವಾಗಿದೆ ಎಂದರು.
ನಾನು ದೇವಾಲಯದಲ್ಲಿ ತಾಯಿ ಬಳಿ ತಪ್ಪು ಯಾರದ್ದು ಸರಿ ಯಾರದ್ದು ಎಂದು ತೋರಿಸುವಂತೆ ಹೇಳಿದ್ದೆ. ಪ್ರಸಂಗ ನಡೆದ ಒಂದೇ ವರ್ಷಕ್ಕೆ ತೀರ್ಪು ಬಂದಿದೆ. ತಪ್ಪು ಮಾಡಿದರೂ ಬಂಡತನದಿಂದ ಶಕ್ತಿ ದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಸಾ. ರಾ. ಮಹೇಶ್ ಹೇಳಿದರು.
ಹೆಚ್.ವಿಶ್ವನಾಥ್ ಗೆ ಇದು ದೇವರು ಕೊಟ್ಟ ಶಿಕ್ಷೆ ಹಾಗಾಗಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹರಕೆ ತೀರಿಸಿದ್ದೇನೆ ಎಂದು ಅವರು ತಿಳಿಸಿದರು.
ಹೆಚ್.ವಿಶ್ವನಾಥ್ ಗೆ ದೇವರು ಕೊಟ್ಟ ಶಿಕ್ಷೆ- ಶಾಸಕ ಸಾ.ರಾ. ಮಹೇಶ್

