ನಿಮಗೆ ಕೊಟ್ಟಿರುವ ಖಾಕಿ, ಶಸ್ತ್ರಾಸ್ತ್ರ ಗೌರವ ಉಳಿಸುವ ಕೆಲಸ ಮಾಡಿ -ಗೃಹ ಸಚಿವ

ಬೆಳಗಾವಿ: ನಿಮಗೆ ಕೊಟ್ಟಿರುವ ಖಾಕಿ, ಶಸ್ತ್ರಾಸ್ತ್ರಗಳ ಗೌರವವನ್ನು ಉಳಿಸುವ ಕೆಲಸವನ್ನು ತಾವು ಮಾಡಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ಕೆಎಸ್‍ಆರ್ ಪಿ ತರಬೇತಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕೆಎಸ್‍ಆರ್ ಪಿ 6ನೇ ತಂಡದ ವಿಶೇಷ ಮೀಸಲು ಪೆÇಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೃಹ ಸಚಿವರು ಮಾತನಾಡಿದರು.
ಯಾವುದೇ ಒತ್ತಾಯ, ಒತ್ತಡಕ್ಕೂ ಮಣಿಯದೇ ನ್ಯಾಯ, ನಿಷ್ಠುರತೆಯಿಂದ ನೀವು ಕಾರ್ಯವನ್ನು ದಕ್ಷತೆಯಿಂದ ಮಾಡಬೇಕು. ಯಾವುದೇ ಕಾರಣಕ್ಕೂ ನಿಮ್ಮಿಂದ ಅನ್ಯಾಯ ಆಗಬಾರದು ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಕಳೆದ ಒಂದು ವರ್ಷದ ತರಬೇತಿಯಲ್ಲಿ ಅತ್ಯುತ್ತಮ ಸಾಮರ್ಥ್ಯ ಮತ್ತು ದಕ್ಷತೆಯನ್ನು ಮೈಗೂಡಿಸಿಕೊಂಡಿದ್ದಿರಿ. ಕರ್ನಾಟಕ ರಾಜ್ಯದ ಪೆÇಲೀಸರು ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಶ್ರೇಷ್ಠ ಪೆÇಲೀಸರು. ಅಂತಹ ಒಂದು ಪೆÇಲೀಸ್ ತಂಡಕ್ಕೆ ತಾವು ಸೇರಿಸಿದ್ದಕ್ಕೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
2021ರಲ್ಲಿ ವಿದೇಶದಲ್ಲಿ ಅತ್ಯಂತ ಸ್ಪೇಶಲಿಸ್ಟ್ ಟ್ರೇನಿಂಗ್ ಸ್ಥಳಗಳಾದ ಸ್ಕಾಟಲೆಂಡ್ ಯಾರ್ಡ್, ಅಮೆರಿಕನ್ ಪೆÇಲೀಸ್ ಅಕಾಡೆಮಿ ಸೇರಿ ಎಲ್ಲಾ ಪ್ರಮುಖ ಪೆÇಲೀಸ್ ತರಬೇತಿ ಶಾಲೆಗಳ ಜೊತೆ ಸಂಬಂಧ ಬೆಳೆಸಿ ಎಕ್ಸಚೆಂಜ್ ಪೆÇ್ರೀಗ್ರಾಂನಡಿ ಉನ್ನತ ಮಟ್ಟದ ಟ್ರೇನಿಂಗ್ ಪಡೆದಿರುವ ಪೆÇಲೀಸರನ್ನು ಮೆರಿಟಿರೋರಿಯಸ್ ಟ್ರೇನಿಂಗ್‍ಗೆ ಕಳಿಸಿಕೊಡುತ್ತೇವೆ ಎಂದರು.
ಅದೇ ರೀತಿ ವಿದೇಶಗಳಿಂದ ತಜ್ಞರನ್ನು ಕರೆಸಿ ನಮ್ಮ ಪೆÇಲೀಸರಿಗೆ ಉತ್ತಮ ತರಬೇತಿ ನೀಡುವ ಕೆಲಸ ಮಾಡಲಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎಡಿಜಿಪಿ ಅಲೋಕಕುಮಾರ, ಐಜಿಪಿ ರಾಘವೇಂದ್ರ ಸುಹಾಸ, ಕಮಿಷ್ನರ್ ಕೆ. ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಕೆಎಸ್‍ಆರ್ ಪಿ ಕಮಾಂಡಂಟ್ ಹಮ್ಜಾ ಹುಸೇನ್ ಉಪಸ್ಥಿತರಿದ್ದರು.
ಈ ವೇಳೆ ತರಬೇತಿ ಪಡೆದ 187 ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ನಿರ್ಗಮನ ಪಥಸಂಚನ ನಡೆಯಿತು.